ಪೊಳಲಿ: ಪೊಳಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಆಯೋಜಿಸಿದ ಮಾದಕ ವ್ಯಸನದಿಂದ ಮುಕ್ತ ಸಮಾಜ ಎಂಬ ಕಾರ್ಯಕ್ರಮದಲ್ಲಿ ಮೌನೇಶ್ ವಿಶ್ವಕರ್ಮರವರು ವಿದ್ಯಾರ್ಥಿಗಳಲ್ಲಿ ಜಾಗ್ರತಿಯನ್ನು ಮೂಡಿಸಿದರು.

ಸ್ವಚ್ಛ ಸಮಾಜದ ಕಡೆಗೆ ಮಹತ್ವ ನೀಡಿ ಮಾದಕ ವ್ಯಸನದ ವಿರುದ್ಧವಾಗಿ ನಡೆಯಬೇಕು. ಮಾದಕ ವ್ಯಸನಗಳು ಸಂಪೂರ್ಣವಾಗಿ ನಿಲ್ಲಬೇಕು. ಇಂದು ಸಮಾಜದಲ್ಲಿ ದುಶ್ಚಟಗಳ ದುಷ್ಪಾರಿಣಾಮದ ಬಗ್ಗೆ ಅರಿವನ್ನು ಮೂಡಿಸುತ್ತಾ ಸತ್ಪ್ರಜೆಗಳಾಗುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷರಾದ ಮಂಜುನಾಥ ಆಚಾರ್ಯ ಮತ್ತು ಶಾಲಾ ಮುಖ್ಯ ಶಿಕ್ಷಕಿ ಉಮಾ ಉಪಸ್ಥಿತರಿದ್ದರು. ಸಮಾಜ ಶಿಕ್ಷಕಿ ರಂಜಿತಾ ರಾಜೀವ ಟಿ. ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಉಮಾ ವಂದಿಸಿದರು.