ಮೂಡುಬಿದಿರೆ : ಶಿರ್ತಾಡಿ ಗ್ರಾ.ಪಂನ ಆವರಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಲತಾ ಹೆಗ್ಡೆ ಅವರು ಧ್ವಜವನ್ನು ಅರಳಿಸುವ ಮೂಲಕ 72ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್ ಜೈನ್, ಮಂಗಳೂರು ಧರ್ಮ ಪ್ರಾಂತ್ಯದ ಐಸಿವೈಎಂನ ಅಧ್ಯಕ್ಷ ಜೈಸನ್ ಪಿರೇರಾ, ಶಿರ್ತಾಡಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೋ, ಪಂಚಾಯತ್ ಪಿಡಿಓ ನೋನು, ಕಾರ್ಯದರ್ಶಿ ರವಿಕುಮಾರ್ ಸಿಬಂದಿ ಯಶೋಧರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.