ಮೂಡುಬಿದಿರೆ:ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿ ಇಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ಶಾಲೆಯ ಸ್ಥಾಪಕರಲ್ಲೊಬ್ಬರಾದ ದಯಾನಂದ ಬಿ. ಕೋಟ್ಯಾನ್ ಧ್ವಜಾರೋಹಣ ನೆರವೇರಿಸಿದರು.
ಶಾಲಾ ಶಿಕ್ಷಕಿ ವಿಶಾಲಾಕ್ಷಿ, ಸ್ಥಳೀಯರಾದ ಚಿನ್ನಯ ಶೆಟ್ಟಿ, ನಿವೃತ್ತ ಶಿಕ್ಷಕ ಪಾಲ್ತಾಡಿ ಭಾಸ್ಕರ ಆಚಾರ್ಯ, ದಿಲೀಪ್ ಶೆಟ್ಟಿ, ವಿಶ್ವನಾಥ ಕೋಟ್ಯಾನ್, ಪತ್ರಕರ್ತ ಪ್ರಸನ್ನ ಹೆಗ್ಡೆ, ಅಂಗನವಾಡಿ ಶಿಕ್ಷಕಿ ಹೇಮಾವತಿ ಆರ್.ಪೂಜಾರಿ, ವಿನೋದ ಎನ್. ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.