ಮೂಡಬಿದಿರೆ: ಆಳ್ವಾಸ್ ಸ್ನಾತಕೋತ್ತರ ಮನಶಾಸ್ತ್ರ ವಿಭಾಗದ ‘ಯುನೋಯಾ’ ಫೋರಂನ 2018-19 ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾಲೇಜಿನ ಮನಶಾಸ್ತ್ರ ವಿಭಾಗದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಾಫ್ಟ ಸ್ಕೀಲ್ ಟ್ರೈನರ್ ವೆರಿನಾ ಜೋಶ್ನಾ ಮಾತನಾಡಿ, `ನಾವು ನಮ್ಮ ಜೀವನವನ್ನು ಹೇಗೆ ಅರಿತುಕೊಳ್ಳುತ್ತೇವೆ ಎನ್ನುವುದು ತುಂಬಾನೇ ಮುಖ್ಯ. ನಮ್ಮಲ್ಲಿರುವ ಧನಾತ್ಮಕ ಶಕ್ತಿ ಕುಂದದಂತೆ ನಾವು ಕಾರ್ಯ ನಿರ್ವಹಿಸಿ, ಬದಲಾದ ಸಂದರ್ಭದೊಂದಿಗೆ ಹೊಂದಿಕೊಳ್ಳವುದನ್ನು ಕಲಿಯಬೇಕು” ಎಂದರು.

psychology (4)

psychology (2)

psychology (1)
ಅಧ್ಯಕ್ಷತೆಯನ್ನು ಮನೋಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದೀಪಾ ಕೊಠಾರಿ ವಹಿಸಿದ್ದರು. ‘ಯುನೋಯಾ’ ಫೋರಂನ ಮುಖಾಂತರ ಮನಃಶಾಸ್ತ್ರವನ್ನು ಸಮುದಾಯದ ಏಳಿಗೆಗಾಗಿ, ಸ್ವಚ್ಛಂದ ಬದುಕಿನ ನಾಳೆಗಾಗಿ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತಿಳಿಸಿದರು. 2018-19 ರ ಕಾರ್ಯಚಟುವಟಿಕೆಗಳ ಬಗ್ಗೆಯು ಮಾಹಿತಿ ನೀಡಿದರು.

psychology (5)

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಜೋಸ್ವಿಟಾ ಮತ್ತು ಫೋರಂನ ವಿದ್ಯಾರ್ಥಿ ಸಂಯೋಜಕಿ ಸೋನಿಯಾ ಮತ್ತು ಕಾರ್ಯದರ್ಶಿ ಪ್ರಣವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾಕ್ಷಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ದಿಶಾ ಭಟ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *