ಗುರುಪುರ : ದುರ್ಗಾವಾಹಿನಿ ಮಾತೃ ಮಂಡಳಿ ಹಾಗೂ ಬಜರಂಗ ದಳ ಶ್ರೀ ವಜ್ರದೇಹಿ ಶಾಖೆ ಗುರುಪುರ ಇವುಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ನಾಲ್ಕನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಜರುಗಿತು.
ಪೂಜೆಯ ಮಂಗಳಾರತಿ ವೇಳೆ ಗುರುಪುರ ಜಂಗಮ ಮಠದ ಶ್ರೀ ರುದ್ರಮುನಿ ಸ್ವಾಮಿ, ಶಾಸಕ ಡಾ. ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಬಿಜೆಪಿ ಸ್ಥಳೀಯ ಮುಖಂಡ ರಾಜೇಶ ಸುವರ್ಣ, ಪ್ರೇಂ, ನಳಿನ್ ಶೆಟ್ಟಿ ಹಾಗೂ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.