ಮೂಡುಬಿದಿರೆ: ನಾಡ ಹಬ್ಬವಾಗಿರುವ ದಸರಾ ಧಾರ್ಮಿಕ ಹಿನ್ನೆಲೆಯೊಂದಿಗೆ ಸಾಂಸ್ಕøತಿಕ ಮಹತ್ವವನ್ನೂ ಸಾರುತ್ತಿದೆ. ಸಮಾಜದಲ್ಲಿ ಕುಸಿಯುತ್ತಿರುವ ಸಾಹಿತ್ಯಾಸಕ್ತಿಯ ನಡುವೆ ಯುವ ಜನತೆಯಲ್ಲಿ ದಸರಾ ನಾಡು ನುಡಿಯ ಕುರಿತು ಅಭಿಮಾನ ಮೂಡಿಸುವ ಉತ್ಸವವಾಗಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಹೇಳಿದರು.
ಮೂಡುಬಿದಿರೆ ಸಮಾಜ ಮಂದಿರ ಸಭಾದ ವತಿಯಿಂದ ಸಮಾಜ ಮಂದಿರದಲ್ಲಿ ಬುಧವಾರ ಆರಂಭಗೊಂಡ 73ನೇ ವರ್ಷದ ಐದು ದಿನಗಳ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Moodubidire Dasara
ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಜತೆಕಾರ್ಯದರ್ಶಿ ಕೆ.ಆರ್. ಪಂಡಿತ್, ಕೋಶಾಧಿಕಾರಿ ವಾಸುದೇವ ರಾವ್, ಸದಸ್ಯರುಗಳಾದ ಎಚ್.ಸುರೇಶ್ ಪ್ರಭು, ಪ್ರತಾಪ್ ಕುಮಾರ್ ಜೈನ್, ಸಿ.ಹೆಚ್. ಅಬ್ದುಲ್ ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕಾೈ ಗಣಪಯ್ಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಎಂ.ಗಣೇಶ್ ಕಾಮತ್ ವಂದಿಸಿದರು. ಬಳಿಕ ಮೂಡುಬಿದಿರೆಯ ಯಕ್ಷನಿಧಿ ಮಕ್ಕಳ ಮೇಳದಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

By suddi9

Leave a Reply

Your email address will not be published. Required fields are marked *