ಮೂಡುಬಿದಿರೆ : ಸಮಾಜೀಕ ಕಾರ್ಯಗಳಲ್ಲಿ ಸದಾ ಕ್ರೀಯಾಶೀಲರಾಗಿ ಜನರ ಜೊತೆಗೆ ಬೆರೆಯುವ ಮತ್ತು ಜನ ಸಮುದಾಯದ ಕಷ್ಟ-ಸುಖಗಳಿಗೆ ಸ್ಪಂದಿಸುವ ರಿಯಾಜ್ ಮತ್ತು ಆತನ ಸಹೋದರನ ಮೇಲೆ ಅ.2ರಂದು ರಾತ್ರಿ ವೇಣೂರು ಠಾಣೆಯ ಪೊಲೀಸರು ಕಾರಣವಿಲ್ಲದೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆ ನಡೆಸಿರುವ ಪೊಲೀಸರಾದ ತಾರಾನಾಥ ಮತ್ತು ರಂಜಿತ್ ಸಹಿತ ಇತರ ಪೊಲೀಸರ ವಿರುದ್ಧ ಮೇಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಡಿವೈಎಫ್‍ಐನ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

protest

ಡಿವೈಎಫ್‍ಐ ಜಿಲ್ಲಾ ಸಮಿತಿ ಸದಸ್ಯ, ಮೂಡುಬಿದಿರೆ ಸಿಪಿಐ(ಎಂ)ನ ಮುಖಂಡ ರಿಯಾಝ್ ಮತ್ತು ಆತನ ಸಹೋದರ ಇರ್ಷಾದ್ ಮೇಲೆ ವೇಣೂರು ಠಾಣೆಯ ಪೊಲೀಸರು ಅ.2ರಂದು ರಾತ್ರಿ ವಿನಾಕಾರಣ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ಮೂಡುಬಿದಿರೆ ತಾಲೂಕು ಕಛೇರಿಯ ಆವರಣದಲ್ಲಿ ಬುಧವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ಸಿಪಿಐಎಂನ ಮೂಡುಬಿದಿರೆ ವಲಯದ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಪುರಸಭಾ ಸದಸ್ಯೆ ರಮಣಿ, ತೆಂಕಮಿಜಾರು ಗ್ರಾ.ಪಂ ಸದಸ್ಯೆ ಲಕ್ಷ್ಮೀ, ಸಿಪಿಐಎಂ ಮುಖಂಡರುಗಳಾದ ಸುಂದರ ಶೆಟ್ಟಿ, ರಾಧಾ, ಗಿರಜಾ, ರಿಯಾಝ್, ರಫೀಕ್ ಹರೇಖಳ ಮತ್ತಿತರರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *