ಮೂಡುಬಿದಿರೆ : ವಿಪರೀತ ಕುಡಿತದ ಚಟವನ್ನು ಹೊಂದಿದ್ದ ವ್ಯಕ್ತಿಯೋರ್ವರ ಶವವು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಸಮೀಪದ ಬಸ್ ನಿಲ್ದಾಣದಲ್ಲಿ ಗುರುವಾರ ಪತ್ತೆಯಾಗಿದೆ.

ಪತ್ತೆಯಾದ ಶವವು ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಾಯಿಕಾಡು ನಿವಾಸಿ ಜಗ್ಗು ಶೆಟ್ಟಿ ಎಂದು ತಿಳಿದುಬಂದಿದೆ.
ಹೆಚ್ಚು ಕುಡಿತದ ಚಟವನ್ನು ಹೊಂದಿದ್ದ ಜಗ್ಗು ಶೆಟ್ಟಿ ಅವರು ಕಳೆದ 5 ದಿನಗಳಿಂದ ಮನೆಗೆ ತೆರಳದೆ ಇರುವುದು ತಿಳಿದು ಬಂದಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *