ಮೂಡುಬಿದಿರೆ : ಇಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದು ಸುಮಾರು 4ಲಕ್ಷ ರೂಗಳಷ್ಟು ನಷ್ಟವಾದ ಘಟನೆ ಕಲ್ಲಮುಂಡ್ಕೂರು ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ.

sidilu news (3)

ಬೆಳ್ಳಿಬೆಟ್ಟು ನಿವಾಸಿ ಲಕ್ಷ್ಮೀ ಪೂಜಾರ್ತಿ ಎಂಬವರ ಮನೆಗೆ ಶನಿವಾರ ತಡರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ. ಮನೆಯ ಮೇಲ್ಛಾವಣಿ ಗೋಡೆಗಳಿಗೂ ಹಾನಿಯಾಗಿದ್ದು ನಷ್ಟ ಸರಿ ಸುಮಾರು 4 ಲಕ್ಷಗಳು ಎಂದು ಅಂದಾಜಿಸಲಾಗಿದೆ.

sidilu news (2)
ಸಿಡಿಲು ಬಡಿದ ಸಂದರ್ಭ ಮನೆಯಲ್ಲಿ ಇಬ್ಬರು ಮಹಿಳೆಯರು ಮಾತ್ರ ಇದ್ದು, ಉಳಿದವರು ಬೇರೆಡೆ ತೆರಳಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

sidilu news (1)

By suddi9

Leave a Reply

Your email address will not be published. Required fields are marked *