ಮೂಡುಬಿದಿರೆ: ಇಂಟರ್ನ್ಯಾಷನಲ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಐಎನ್ಬಿಎ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಅನಿಲ್ ರೂಬನ್ ಮೆಂಡೋನ್ಸಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ನವೆಂಬರ್ 3 ರಂದು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ 2018 ದೇಹಧಾಡ್ರ್ಯ ಸ್ಪರ್ಧೆಯ ವಲ್ರ್ಡ್ಕಪ್ ಮತ್ತು ನವೆಂಬರ್ 8ರಿಂದ 11ರವರೆಗೆ ಅಮೇರಿಕಾದ ಲಾಸ್ವೇಗಸ್ನಲ್ಲಿ ನಡೆಯಲಿರುವ ದಿ ನ್ಯಾಚುರಲ್ ಒಲಿಂಪಿಯಾ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರು ಇದುವರೆಗೆ 14 ಸ್ವರ್ಣಪದಕಗಳನ್ನು ಗೆದ್ದಿದ್ದಾರೆ.