ಬಂಟ್ವಾಳ: ಆಧ್ಯಾತ್ಮಿಕವಾಗಿ ಶ್ರದ್ದಾ ಭಕ್ತಿಯಿಂದ ನಡೆದುಕೊಳ್ಳುವ ಪ್ರತಿಯೊಬ್ಬನು ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ . ಎಂದುಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅದ್ಯಕ್ಷ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಹೇಳಿದರು.
ಅವರು ಪಾಣೆಮಂಗಳೂರಿಗೆ ಸಮೀಪದ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ದೇವಳದ ಅವರಣದಲ್ಲಿ ನಡೆದ ಸಮಾರಂಭದಲ್ಲಿ “ವಿಜ್ಞಾಪಣಾ ಪತ್ರ”ವನ್ನು ಬಿಡುಗಡೆ ಗೊಳಿಸಿ ಮಾತನಾಡಿದರು. 1

ದೇವಾಲಯ ಗಳು ಭಕ್ತಿ ಮತ್ತು ಶಕ್ತಿಯ ಕೇಂದ್ರ ವಾಗಿರುವುದರಿಂದ ಇಂತಹ ಕೇಂದ್ರ ಗಳ ಜೀರ್ಣೋದ್ಧಾರ ಗಳು ಆಗಬೇಕಾಗಿದೆ ಎಂದ ಅವರು ದೇವಾಲಯ ಗಳು ಅಧ್ಯಾತ್ಮಿಕ ಶಕ್ತಿ , ಸಂಸ್ಕಾರ, ಧರ್ಮಶಿಕ್ಷಣ, ಇತಿಹಾಸ ಚರಿತ್ರೆಯನ್ನು ಪೋಷಿಸುವ ಕೇಂದ್ರವಾಗಿದೆ.ಎಂದರು. ‌
ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಮಾತನಾಡಿ ಭಜನೆಯ ಮೂಲಕ ಧಾರ್ಮಿಕವಾಗಿ ಒಟ್ಟಾದ ಹಿಂದೂ ಸಮಾಜ ವಿಭಜನೆ ಯಾರಿಂದಲೂ ಸಾಧ್ಯವಿಲ್ಲ ಎಂದರು. ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿ ಯ ಜೊತೆ ಸಂಸ್ಕಾರ ಮತ್ತು ನಂಬಿಕೆಯನ್ನು ಉಳಿಸುವ ಕೆಲಸ ಅಗಬೇಕಿದೆ ಎಂದರು.4

ಮಾಜಿ ಮುಖ್ಯ ಮಂತ್ರಿಜಗದೀಶ್ ಶೆಟ್ಟರ್ ಅವರ ಸಹಾಯಕ ಜಗನ್ನಾಥ ಬಂಗೇರ ಮಾತನಾಡಿ ಇಂತಹ ಕಾರ್ಯಗಳ ಜೊತೆ ಯುವಕರನ್ನು ಹೆಚ್ಚು ತೊಡಗಿಸಿಕೊಂಡಾಗ ಮುಂದಿನ ಪೀಳಿಗೆಗೆ ಧರ್ಮ ದ ಉಳಿವು ಸಾಧ್ಯ ಎಂದು ಅವರು ಹೇಳಿದರಲ್ಲದೆ ಜೀರ್ಣೋದ್ದಾರ ದ ಕಾರ್ಯಕ್ಕೆ ಎರಡು ಲಕ್ಷ ರೂ ನೀಡುವುದಾಗಿಯು ಪ್ರಕಟಿಸಿದರು.3

ಟೆಲಿಕಾಂ ನಿವ್ರತ್ತ ಜನರಲ್ ಮ್ಯಾನೇಜರ್ ಮಹಾಬಲ ಶೆಟ್ಟಿ ಕಕ್ಕೆಮಜಲು, ಬಂಟ್ವಾಳ ತಾಲೂಕು ಗಾಣಿಗರ ಸೇವಾಸಂಘದ ಅದ್ಯಕ್ಷ ರಘು ಸಪಲ್ಯ , ಜಿಪಂ ಸದಸ್ಯೆ ಕಮಲಾಕ್ಷೀ ಕೆ ಪೂಜಾರಿ, ಮಾಜಿ ಪುರಸಭಾ ಸದಸ್ಯ ಜನಾರ್ಧನ ಬೊಂಡಾಲ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಜನಾರ್ದನ ಕುಲಾಲ್ ನಾಗ್ತಿಮಾರ್, ಬೊಂಡಾಲ ವಿನೋದ್ ಶೆಟ್ಟಿ, ದಯಾನಂದ ಕುಮಾರ್ ಬೊಂಡಾಲ, ದೇವೇಂದ್ರ ಶೆಟ್ಟಿ ಮಂಗಳೂರು, ನಾಗೇಶ್ ಕಲ್ಲಡ್ಕ , ಸುಬ್ರಹ್ಮಣ್ಯ ಭಟ್ ಕಲ್ಲಡ್ಕ, ಪ್ರೇಮ್ ಕುಮಾರ್ ಶೆಟ್ಟಿ, ಸುಕೇಶ್ ಶೆಟ್ಟಿ, ಪ್ರವೀಣ್ ಅಮೀನ್ ಮತ್ತು ವಸಂತ ಅಂಚನ್ ಕಾಪಿಕಾಡು ಉಪಸ್ಥಿತರಿದ್ದರು.2

ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ದೇವಸ್ಥಾನ ಸಮಿತಿ ಅದ್ಯಕ್ಷ ಕೆ ಪದ್ಮನಾಭ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಯರಾಮ ಹೊಳ್ಳ ನಾಗ್ತಿಮಾರು ವಂದಿಸಿದರು.ದೇವಸ್ಥಾನ ದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *