ಕೈಕಂಬ: ಬ್ರಾಹ್ಮಣ ಮಹಾಸಭಾ ಇದರ ಪ್ರಥಮ ಸಮಾವೇಶ ಸಮಾರಂಭವು ಗುರುಪುರ ಕೈಕಂಬದ ಶ್ರೀರಾಮ್ ಸಭಾಂಗಣದಲ್ಲಿ ನ.18ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಅಧ್ಯಕ್ಷತೆಯನ್ನು ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೊ ಇಂಡಸ್ಟ್ರೀಸ್‍ನ ಮಾಲಕರಾದ ಶ್ರೀಪತಿ ಭಟ್ ವಹಿಸಲಿದ್ದಾರೆ.ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ತಾನದ ಪ್ರಧಾನ ಅರ್ಚಕ ವಿದ್ವಾನ್ ವೇದಮೂರ್ತಿ ಡಾ. ಕದ್ರಿ ಪ್ರಭಾಕರ ಅಡಿಗ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಈ ಸಂದರ್ಭದಲ್ಲಿ ನಾರಳ ಮಠದ ಶ್ರೀನಿವಾಸ ಉಪಾಧ್ಯಾಯ ದಂಪತಿಗಳನ್ನು ಸನ್ಮಾನಿಸಲಿಕ್ಕಿದೆ .  ಅಲ್ಲದೇ ಸಭಾಕಾರ್ಯಕ್ರಮದ ಬಳಿಕ ಬ್ರಾಹ್ಮಣ ಸಂತರ್ಪಣೆ ಮಧ್ಯಾಹ್ನ 2.30ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಯಕ್ಷ- ಗಾನ -ವೈಭವ” ಎಂದು ಬ್ರಾಹ್ಮಣ ಸಮಾಜದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *