ಸುದ್ದಿ9 ಕೈಕಂಬ: ಹಾಸನ ಮೂಲದ ಹನುಮಂತಪ್ಪ ಮತ್ತು ಗೌರಿ ಎಂಬವರ ಮಗಳು ಜ್ಯೋತಿ (13) ಅವಳು ಸೆಪ್ಟೆಂಬರ್ 9ರಂದು ಮಂಗಳವಾರ ಕೈಕಂಬದಿಂದ ಕಾಣೆಯಾಗಿದ್ದಾಳೆ ಎಂದು ಹತ್ತಿರದ ಪೊಲಿಸ್ ಠಾಣೆಗೆ ಅವಳ ತಾಯಿ ಗೌರಿ ಗುರುವಾರ ದೂರು ನೀಡಲು ಮುಂದಾಗಿದ್ದಾರೆ
ಇಪ್ಪತ್ತು ವರ್ಷಗಳ ಹಿಂದೆ ಹಾಸನದಿಂದ ವ್ಯಾಪರಕ್ಕೆ ಬಂದು ಮಂಗಳೂರು ಕೈಕಂಬದಲ್ಲಿ ವಾಸವಿದ್ದ ಅವರು ಹಲವು ಕಡೆಗಳಿಗೆ ತೆರಳಿ ಪ್ಲಾಸ್ಟಿಕ್ ಬಕೇಟ್ ವ್ಯಾಪರ ಮಾಡುತ್ತಿದ್ದರು. ಅವರ ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಜ್ಯೋತಿ 6ನೇ ತರಗತಿಯಲ್ಲಿ ಕಳಿಯುತ್ತಿದ್ದು ಮನೆಯಲ್ಲಿ ತಾಯಿ ಜೋರು ಮಾಡಿದ್ದಕ್ಕೆಮನೆ ಬಿಟ್ಟು ತರಳಿರಬಹುದೆಂದು ಸಂಕಿಸಲಾಗಿದೆ. ತನ್ನ ಮಗಳನ್ನು ಹುಡುಕಿ ಕೊಡಲು ಹತ್ತಿರದ ಪೋಲಿಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.