ಕೈಕಂಬ : ಗುರುಪುರ ಕೈಕಂಬಕ್ಕೆ ಹತ್ತಿರದ ಕಿನ್ನಿಕಂಬಳ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶುಕ್ರವಾರ ಜರುಗಿತು.ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ, ಇಂದು ಗ್ರಾಮದಲ್ಲಿ ನಾಲ್ಕೈದು ಶಾಲೆಗಳಿವೆ. ಹಿಂದೆ ಒಂದೇ ಶಾಲೆ ಕೆಲವು ಗ್ರಾಮಗಳ ಮಕ್ಕಳ ಶಿಕ್ಷಣದಾಹ ಪೂರೈಸುತ್ತಿತ್ತು. ಆ ಕಾಲದಲ್ಲಿ ಇಲ್ಲಿ ಶಿಸ್ತು ಹಾಗೂ ಜ್ಞಾನಪ್ರದಾಯಕ ಶಿಕ್ಷಣ ಪಡೆದಿರುವ ಅದೆಷ್ಟೋ ಮಂದಿ ಇಂದು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಶಾಲೆಗಳು ಹೆಚ್ಚಿದರೆ ಸಾಲದು, ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟವೂ ಹೆಚ್ಚಬೇಕು. ಈ ನಿಟ್ಟಿನಲ್ಲಿ ರೋಸಾ ಮಿಸ್ತಿಕ ಪ್ರಾಥಮಿಕ ಶಾಲೆ ಹಾಗೂ ಶಿಕ್ಷಕರು ಅಭಿನಂದನಾರ್ಹರು ಎಂದರು.
ಬೆಥನಿ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಸಿಸ್ಟರ್ ಅನ್ನಾ ಮಾರಿಯಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಕೀಲ ಲೂವಿಸ್ ಲೋಬೊ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ಲೇವಿ ಡಿ’ಸೋಜ ಇದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.