ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಿಮಿತ್ತ ಹೊಸದಾಗಿ ನರ್ಮಿಸಲಾದ ಧ್ವಜಸ್ತಂಭದ(ಕೊಡಿಮರ) ಪ್ರತಿಷ್ಠಾಪನೆ ಇಂದು ಸಕಲ ಪೂಜಾ ಕಾರ್ಯಕ್ರಮಗಳೊಂದಿಗೆ ಜರುಗಿತು.18vpdhvajastamba

ಭಂಡಾರಮನೆಯಲ್ಲಿ ದೈವದ ಪಾತ್ರಿಗಳಾದ ಚಂದ್ರಹಾಸ ಪೂಜಾರಿ ಕೌಡೂರು ಮತ್ತು ತನಿಯಪ್ಪ ಪೂಜಾರಿಯವರ ನೇತೃತ್ವದಲ್ಲಿ ಪೂಜೆ ನೆರವೇರಿದ ಬಳಿಕ, ಅಶ್ವತ್ಥಕಟ್ಟೆ ಬಳಿ ಇರಿಸಲಾಗಿದ್ದ ನೂತನ ಕೊಡಿಮರಕ್ಕೆ ವಾಸುದೇವ ಭಟ್ ಮತ್ತು ಅಣ್ಣು ಭಟ್ ಪೂಜೆ ಮಾಡಿದರು. ನಂತರ ದೈವಸ್ಥಾನಕ್ಕೆ ಕೊಡಿಮರ ತಂದು, ಪ್ರತಿಷ್ಠಾಪನೆ ಮಾಡಲಾಯಿತು.18-0202

ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರ ಪ್ರಮೋದ್ ಕುಮಾರ್ ರೈ, ಗುತ್ತುಗಳ ಯಜಮಾನರು ಹಾಗೂ ಊರ ಹತ್ತು ಸಮಸ್ತರು ದೈವಸ್ಥಾನದಲ್ಲಿ ಹಾಜರಿದ್ದರು. ಇದೇ ವೇಳೆ ಫೆಬ್ರವರಿ 3-7ರವರೆಗೆ ಇಲ್ಲಿ ಜರುಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕಾಗಿ ಚಪ್ಪರ ಮುಹೂರ್ತ ನೆರವೇರಿತು.

By suddi9

Leave a Reply

Your email address will not be published. Required fields are marked *