ಮೂಡುಬಿದಿರೆ: ರಾಜ್ಯ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ರೂ.1.5 ಕೋಟಿ ಅನುದಾನದಲ್ಲಿ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲಿನ ಎರುಗುಂಡಿ ಹೊಳೆಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕಿಂಡಿ ಅಣೆಕಟ್ಟ ಅನ್ನು ಲೋಕಾರ್ಪಣೆಗೊಳಿಸಿ, ಹಿಂದಿನ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಕಂಚಿಬೈಲು ಅಣೆಕಟ್ಟಿಗೆ ಅನುದಾನ ಬಿಡುಗಡೆ ಮಾಡಿ, ಶಂಕುಸ್ಥಾಪನೆ ಮಾಡಿದ್ದಾರೆ. ಅದರ ಕಾಮಗಾರಿ ಪೂರ್ಣಗೊಂಡು ಇಂದು ಗ್ರಾಮಸ್ಥರಿಗೆ ಕುಡಿಯುವ ನೀರು, ಕೃಷಿಗೆ ಉಪಯೋಗವಾಗಲಿದೆ ಎಂದರು.

Kanchibailu Kindi anekattu (2)
ಜಿ.ಪಂ ಸದಸ್ಯ ಸುಚರಿತ ಶೆಟ್ಟಿ ಮಾತನಾಡಿ, ಪಾಲಡ್ಕ ಚರ್ಚ್‍ನ ಧರ್ಮಗುರು ಅವರು ಗ್ರಾಮಸ್ಥರನ್ನು ಒಗ್ಗೂಡಿಸಿ ಅಂತರ್ಜಲ, ಕಿಂಡಿ ಅಣೆಕಟ್ಟಿನ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿದ್ದರು. ಅದಕ್ಕೆ ಪೂರಕವಾಗಿ ಹಿಂದಿನ ಶಾಸಕರು ಅನುದಾನ ಬಿಡುಗಡೆ ಮಾಡಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯವಿರುವ ಕಡೆ ಕಿಂಡಿ ಅಣೆಕಟ್ಟು ನಿರ್ಮಿಸಲು ಚಿಂತನೆ ನಡೆಸಿ, ಅದಕ್ಕೆ ಪೂರಕವಾದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

Kanchibailu Kindi anekattu (1)
ತಾ.ಪಂ ಸದಸ್ಯೆ ವನಿತಾ ನಾಯ್ಕ್, ಪುತ್ತಿಗೆ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶುಭಾ ಹೆಬ್ಬಾರ್, ಸದಸ್ಯರಾದ ಶಶಿಧರ್ ಅಂಚನ್, ನಾಗವರ್ಮ ಜೈನ್, ಗಿರೀಶ್ ಹಂಡೇಲು, ಗಿರೀಶ್ ಕುಮಾರ್, ನಾಗರಾಜ ಕರ್ಕೇರ, ಶಶಿಕಲ ರಾವ್, ಕಲ್ಲಮುಂಡ್ಕೂರು ಪಂಚಾಯಿತಿ ಸುಂದರ ಪೂಜಾರಿ, ಸದಸ್ಯ ವಸಂತ, ಪಿಡಿಒ ಉಗ್ಗಪ್ಪ ಮೂಲ್ಯ, ಗ್ರಾಮಸ್ಥರಾದ ಅಜಯ್ ರೈ, ರಾಘವೇಂದ್ರ ಹೆಬ್ಬಾರ್, ಫೆಲಿಕ್ಸ್, ಸತೀಶ್ ಪ್ರಭು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *