ಕೈಕಂಬ: ಪೊಳಲಿಯ ದೇವರಿಗೆ ದ್ವಾರಧ್ವಯಗಳ ರಜತ ಕವಚ ಸಮರ್ಪಿಸಲು ಅವಕಾಶ ಸಿಕ್ಕಿರುವುದು ತೀಯಾ ಬಾಂಧವರ ಪುಣ್ಯವಾಗಿದೆ. ದೇವರ ಮುಖಾಂತರ ಸಮಾಜವನ್ನು ಒಟ್ಟುಗೂಡುವ ಕೆಲಸ ಸಿಕ್ಕಿದ್ದು, ಮುಂದೆ ಅನೇಕ ಪುಣ್ಯ ಕೆಲಸಗಳಿಗೆ ಭಾಗಿಯಾಗಲು ಪ್ರೋತ್ಸಾಹ ಸಿಕ್ಕಿದಂತಾಗಿದೆ. ಎಲ್ಲರಿಗೂ ದೇವರ ಕೃಪೆ ಸಿಗಲಿ ಎಂದು ಶ್ರೀಚೀರುಂಭಾ ಭಗವತಿ ಕ್ಷೇತ್ರ ಉಳ್ಳಾಲ ಇದರ ಅಧ್ಯಕ್ಷರಾಗಿರುವ ಚಂದ್ರಹಾಸ ಉಳ್ಳಾಲ್ ಹೇಳಿದರು.
ಅವರು ಭಾನುವಾರ ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚ ಸಮರ್ಪಣಾ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು.
ದುಡ್ಡಿನಿಂದ ದಾನ ಧರ್ಮವನ್ನು ಮಾಡಬಹುದು. ದೇವರು ನೀಡಿದ ಸಂಪತ್ತನ್ನು ದೇವರಿಗೆ ಅರ್ಪಿಸಿದರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ಎಂದು ಪೊಳಲಿಯ ರಾಮಚರಣ ತಂತ್ರಿ ಹೇಳಿದರು.ತೀಯಾ ಸಮಾಜದ ಮತ್ತೊಬ್ಬ ಮುಖಂಡರಾದ ನಾರಾಯಣ ಕೆ. ಅವರು ಮಾತನಾಡಿ, ಇಂದು ಸಮಾಜದಲ್ಲಿ ಸಂಸ್ಕಾರ ಕಮ್ಮಿಯಾಗಿದೆ ಎನ್ನುವುದು ಸುಳ್ಳು.
ಪತ್ರಿಕೆಗಳಲ್ಲಿ ಪ್ರತಿನಿತ್ಯವೂ ಧಾರ್ಮಿಕತೆಯ ಕುರಿತಾಗಿ ಸುದ್ದಿಗಳು ಬರುತ್ತಿದ್ದು ಇದರಿಂದ ಜನರು ಧಾರ್ಮಿಕತೆಗೆ ಹೊರಳುತ್ತಿದ್ದಾರೆ ಎನ್ನುವುದನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು. ತೀಯಾ ಸಮುದಾಯ ಮುಂಬೈ ಇದರ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಕಟೀಲು ಮಾತನಾಡಿದರು.
ತೀಯಾ ಸಮಾಜದ ಆಚಾರಪಟ್ಟವರು ಜ್ಯೋತಿಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತೀಯಾ ಸಮುದಾಯದ 18 ಭಗವತಿ ಕ್ಷೇತ್ರಗಳ ಮೊಕ್ತೇಸರರು- ಗುರಿಕಾರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೊಳಲಿ ದೇವಸ್ಥಾನದ ಮಕ್ತೇಸರಹಾಗೂ ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ಯು ತಾರನಾಥ ಆಳ್ವ, ಆಡಳಿತ ಮೊಕ್ತೇಸರ ಡಾ| ಎ. ಮಂಜಯ್ಯ ಶೆಟ್ಟಿ,ಪೊಳಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಭಗವತಿ ಕ್ಷೇತ್ರ ಉಳ್ಳಾಲದ ಮೊಕ್ತೇಸರ ಗಂಗಾಧರ ಉಳ್ಳಾಲ್, ಭಗವತಿ ಕ್ಷೇತ್ರ ಕುದ್ರೋಳಿ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಬೊಲ್ನಾಡು ಶ್ರೀಭಗವತಿ ಪುನರ್‍ನಿರ್ಮಾಣ ಸಮಿತಿಯ ಅಧ್ಯಕ್ಷ ಯತೀಂದ್ರನಾಥ ಪುತ್ತೂರು, ಭಗವತಿ ಸೇ.ಸ.ಬ್ಯಾಂಕ್ ಜಪ್ಪುವಿನ ಅಧ್ಯಕ್ಷ ನಾರಾಯಣ ಕೆ., ಶ್ರೀಕ್ಷೇತ್ರ ನಂದ್ಯ ಆಡಳಿತ ಮೊಕ್ತೇಸರ ಸುಂದರ ಬೆಳ್ಚಡ ನಂದ್ಯ, ಬಂಟ್ವಾಳ ಬಿಲ್ಲವ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ,
ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಇರಾ, ಸಾಯಿ ಹೀಲಿಂಗ್ ಸೆಂಟರ್‍ನ ವಿಜಯ ಸುವರ್ಣ ಮಾದುಕೋಡಿ, ಭಗವತಿ ಕ್ಷೇತ್ರ ಉಳ್ಳಾಲ ಉಪಾಧ್ಯಕ್ಷ ಸುರೇಶ್ ಭಟ್ನಗರ್, ಶ್ರೀಭದ್ರಕಾಳಿ ದೇವಸ್ಥಾನ ಬೆಂಜನಪದವು ಧರ್ಮದರ್ಶಿ ರಮೇಶ್ ಬೆಂಜನಪದವು, ಉಳ್ಳಾಲ ಭಗವತಿ ಕ್ಷೇತ್ರ ಪ್ರ.ಕಾರ್ಯದರ್ಶಿ ಬಾಬು ಬೆಳ್ಚಡ, ಕೋಶದಿಕಾರಿ ಯಶವಂತ ಉಚ್ಚಿಲ್, ಯುವವೇದಿಕೆ ಅಧ್ಯಕ್ಷ ನಾಗೇಶ್ ಉಳ್ಳಾಲ್, ಮಹಿಳಾ ವೇದಿಕೆ ಅಧ್ಯಕ್ಷೆ ಮಹಾಲಕ್ಷ್ಮಿ, ಭಗವತಿ ಮೋಟಾರ್ಸ್‍ನ ಸುರೇಶ್, ಚಿದಾನಂದ ಗುರಿಕಾರ ನಂದ್ಯ, ಉಮೇಶ್ ಸಾಲ್ಯಾನ್ ಬೆಂಜನಪದವು, ರಾಮಚಂದ್ರ ಬಂಗೇರಾ, ಗೋಪಾಲ ಬೆಳ್ಚಡ, ರಾಘವ ಸುವರ್ಣ, ಗಿರಿಜಾ ರಾಮಚಂದ್ರ ಬಂಗೇರಾ, ರೇಖಾ ಉಮೇಶ್ ಸಾಲ್ಯಾನ್, ದಾಮೋದರ ಮುಂಬೈ, ಜನಾರ್ದನ ಅಮ್ಮುಂಜೆ ಮುಂತಾದವರಯ ಉಪಸ್ಥಿತರಿದ್ದರು.
ತೀಯಾ ಸ್ವ.ಸ ಗುಂಪು ಉಳ್ಳಾದದ ವನಿತೆಯರು ಆಶಯಗೀತೆ ಹಾಡಿದರು. ರಜತ ಕವಚವನ್ನು ರಚಿಸಿದ ತುಪ್ಪೆಕಲ್ಲು ಸೌಮ್ಯ-ಧನಂಜಯ ಆಚಾರ್ಯ ದಂಪತಿಯನ್ನು ಸಮ್ಮಾನಿಸಲಾಯಿತು. ಜನಾರ್ದನ ಅಮ್ಮುಂಜೆ ಪ್ರಾಸ್ತಾವಿಕ ನುಡಿದರು. . ಸುದೀರ್ ಕುದ್ರೋಳಿ ಸ್ವಾಗತಿಸಿದರು. ಅರುಣ್ ಉಳ್ಳಾಲ್ ನಿರೂಪಿಸಿದರು. ಜಗದೀಶ್ ಗಡೆಗೋಳಿ ಧನ್ಯವಾದಗೈದರು.
ನಂದ್ಯದಿಂದ ಪೊಳಲಿ ತನಕ ರಜತ ಕವಚವನ್ನು ಭವ್ಯ ಮೆರವಣಿಗೆಯ ಮೂಲಕ ಕಾಲ್ನಡಿಗೆಯಲ್ಲಿ ತೆರಳಿ ಸಮರ್ಪಿಸಲಾಯಿತು. ಮಾರ್ಗದ್ದುದ್ದಕ್ಕು ಹಿಂದೂ ಸಂಘಟನೆಗಳು ಹಾಗೂ ಮುಸ್ಲಿಂ ಭಾಂಧವರು ಪಾನಕದ ವ್ಯವಸ್ಥೆಯನ್ನು ಮಾಡಿದ್ದರು.









