ಗುರುಪುರ: ಎ.9 ಮಳಲಿ ಜುಮ್ಮಾ ಮಸೀದಿಯ ಹಿರಿಯ ಸದಸ್ಯ ಮಳಲಿ ಹೊಸಮನೆ ಹಮ್ಮಬ್ಬ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು. ಮಳಲಿ ಮಸೀದಿಯಲ್ಲಿ ಹಲವು ವರ್ಷ ಗಳ ಕಾಲ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ರಿಯವರು ವೃತ್ತಿಯಲ್ಲಿ ಚಾಲಕರಾಗಿದ್ದು 15 ವರ್ಷಗಳ ಕಾಲ ಹನುಮಾನ್ ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಚಾಲಕರಾಗಿ ಸೇವೆ ಮಾಡಿರುತ್ತಾರೆ. 9 ವರ್ಷಗಳ ಕಾಲ ಜೋಕಟ್ಟೆ ಅಂಜುಮಾನ್ ಶಾಲಾ ಬಸ್ಸಿನಲ್ಲಿ ಚಾಲಕರಾಗಿಯೂ ಸೇವೆ ಸಲ್ಲಿಸಿರುವರು.
ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರ ಸಹಿತ ಸಹೋದರ ಮಳಲಿ ಜುಮ್ಮಾ ಮಸೀದಿಯ ಅಧ್ಯಕ್ಷ ಮಾಮು ಮಣೇಲ್ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಮೃತರ ದಫನ ಕಾರ್ಯವು ಮಳಲಿ ಜುಮ್ಮಾ ಮಸೀದಿ ವಠಾರದಲ್ಲಿ ರವಿವಾರ ನೆರವೇರಿತು.

IMG-20190408-WA0003

 ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವಾ, ಬ್ಯಾರಿ ಪರಿಷತ್ ನ ಮುಖಂಡರಾದ ಮುಹಮ್ಮದ್ ಆಲಿ, ಖ್ಯಾತ ನ್ಯಾಯವಾದಿ ಅಬ್ದುಲ್ ರಜಾಕ್ ಕೃಷ್ಣಾಪುರ, ಜಿ.ಪಂ.ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯ ಸುನೀಲ್ ಕುಮಾರ್, ಗಂಜಿಮಠ ಗ್ರಾಪಂ ಉಪಾಧ್ಯಕ್ಷ ಆರ್.ಎಸ್. ಜಾಕಿರ್, ಗ್ರಾಪಂ ಸದಸ್ಯ ಅಬ್ದುಲ್ ಹಮೀದ್,ಬಿಜೆಪಿ ಅಲ್ಪಸಂಖ್ಯಾತರ ಘಟಕದ ಶಾ ನವಾಝ್, ಉದ್ಯಮಿ ಅಬೂಬಕ್ಕರ್ ಕೊಂಚಾರ್, ಕರ್ನಾಟಕ ರಾಜ್ಯದ ಕಾಂಗ್ರೆಸ್ ಹಿಂದುಳಿದ ಘಟಕದ ಗಣೇಶ್   ಪೂಜಾರಿ, ಮಳಲಿ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಎಂ.ಎ ಅಬೂಬಕ್ಕರ್, ಕಾರ್ಯದರ್ಶಿ ಕೆ.ಮಯ್ಯದ್ಧಿ, ಲೆಕ್ಕ ಪರಿಶೋಧಕರಾದ ಸರ್ಫ್ ರಾಜ್, ಕೋಶಾಧಿಕಾರಿ ರಝಾಕ್, ಮಸೀದಿ ಖತೀಬರಾದ ಇಬ್ರಾಹಿಂ ದಾರಿಮಿ, ಅರೆಬಿಕ್ ಮದರಸ ಅಧ್ಯಾಪಕರಾದ ಸಿರಾಜುದ್ಧೀನ್ ದಾರಿಮಿ ರವರು ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *