ಕರಿಯಂಗಳ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಕರಿಯಂಗಳ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ಎ.28 ರಂದು ಭಾನುವಾರ ನಡೆಯಲಿದೆ.
* ಕಾರ್ಯಕ್ರಮ:
ಬೆಳಗ್ಗೆ 8ಗಂಟೆಗೆ ನಾಗಬನದಲ್ಲಿ ನಾಗತಂಬಿಲ,8.30ರಿಂದ 9.30ರತನಕ ವಿಠೋಭ ಬಾಲ ಭಜನಾ ಮಂಡಳಿಯವರಿಂದ ಭಜನೆ, 9.30ರಿಂದ ದೈವದ ಸಾನಿಧ್ಯದಲ್ಲಿ ಗಣಹೋಮ, ಬೆಳಗ್ಗೆ ಗಂಟೆ 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಂತರ ಮಹಾಪೂಜೆ ಪ್ರಸಾದ ವಿತರಣೆ ಮಧ್ಯಾಹ್ನ 1 ಗಂಟೆಯಿಂ ಅನ್ನ ಸಂತರ್ಪಣೆ,ರಾತ್ರಿ ಗಂಟೆ 8 ಕ್ಕೆ ಮಹಿಷಂದಾಯ ನೇಮೋತ್ಸವ, ರಾತ್ರಿ ಗಂಟೆ 10ಕ್ಕೆ ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ, ರಾತ್ರಿ ಗಂಟೆ 3 ಕ್ಕೆ ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.