ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ಅವರ ಭಾರತದ ಎರಡನೇ ದಿನದ ಪ್ರವಾಸ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಯಿತು. ದೆಹಲಿಯ ಹೈದ್ರಾಬಾದ್ ಹೌಸ್’ನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್’ಪಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಉಭಯ ದೇಶಗಳ ಮಧ್ಯೆ ಇಂದು ಆಗಿರುವ ಒಪ್ಪಂದಗಳನ್ನ ವಿವರಿಸಿದರು.
ನವದೆಹಲಿಯಲ್ಲಿ ಹೈದರಾಬಾದ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಚೀನಾ ಅಧ್ಯಕ್ಷರೊಂದಿಗಿನ ಮಾತುಕತೆ ಫಲಪ್ರದವಾಗಿದೆ. ಭಾರತದ ವಿವಿಧ ಕ್ಷೇತ್ರಗಳಲ್ಲಿ ಚೀನಾ ಸುಮಾರು 20 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ ಎಂದರು. ಜತೆಗೆ ಚೀನಾ ಅತ್ಯಂತ ದೊಡ್ಡ ನೆರ ರಾಷ್ಟ್ರವಾಗಿದ್ದು ಚೀನಾದೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದುವುದು ಅತಿ ಮುಖ್ಯವಾಗಿದೆ ಎಂದರು. ಅಂತರಾಷ್ಟ್ರೀಯ ಗಡಿಯಲ್ಲಿ ಚೀನಾ ಸೈನಿಕರು ವಿನಃ ಕಾರಣ ಗಡಿ ಅತಿಕ್ರಮಣ ಮಾಡುತ್ತಿದ್ದು, ಗಡಿ ಸಮಸ್ಯೆ ನಿವಾರಣೆಯಾಗಬೇಕು ಹಾಗೂ ಗಡಿಯಲ್ಲಿ ಶಾಂತಿ ಸ್ಥಿರತೆ ನೆಲಸಬೇಕು ಎಂದು ಮೋದಿ ಹೇಳಿದರು. ಸ್ವಾತಂತ್ರ್ಯ ನಂತರ ಭಾರತ ಮತ್ತು ಚೀನಾದ ನಡುವೆ ಐತಿಹಾಸಿಕ ಸಂಬಂಧ ಹೊಂದಿದೆ. ಇತ್ತೀಚೆಗೆ ಉಭಯ ದೇಶಗಳ ಆರ್ಥಿಕ ಸಂಬಂಧ ಕುಂಠಿತಗೊಂಡಿದ್ದು, ಉಭಯ ದೇಶಗಳ ವ್ಯಾಪರ ಸಂಬಂಧ ಅಸಮತೋಲನಗಳು ಸರಿಹೋಗಬೇಕಿದೆ. ಮುಂದಿನ ದಿನಗಳಲ್ಲಿ ಉತ್ತಮ ಆರ್ಥಿಕ ಸಂಬಂಧ ಹೊಂದಲು ಈ ಭೇಟಿ ಪ್ರಯೋಜನಕಾರಿಯಾಗಿದೆ ಎಂದರು.
ಅಭಿವೃದ್ಧಿಯೇ ಮೂಲ ಮಂತ್ರವಾಗಿರುವ ಚೀನಾದೊಂದಿಗೆ ಉತ್ತಮ ಆರ್ಥಿಕ ಸಂಬಂಧ ಇಟ್ಟುಕೊಂಡರೇ ಭಾರತ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ವಿದೇಶಿ ನೀತಿಯಲ್ಲಿ ನೆರೆ ರಾಷ್ಟ್ರಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಿದ್ದು ತುಂಬಾ ಸಂತಸವಾಗಿದೆ ಎಂದು ಮೋದಿ ಹೇಳಿದರು.
