ಪೊಳಲಿ: ಬಡಗಬೆಳ್ಳೂರಿನ ಶ್ರೀ ಕಾವೇಶ್ವರ ದೇವಸ್ಥಾನ ಮತ್ತು ಶ್ರೀ ಮಾಡ್ಲಾಯ ದೈವಸ್ಥಾನ ಜೀರ್ಣೋದ್ಧಾರಗೊಂಡ ಬೆನ್ನಲ್ಲೇ ಇಲ್ಲಿನ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು, ಶುಕ್ರವಾರ ಬೆಳಿಗ್ಗೆ ಗರ್ಭಗುಡಿಯ `ನಿಧಿಕುಂಭ’ ಪೂಜಾ ಕಾರ್ಯಕ್ರಮ ಉದಯ ಪಾಂಗಣ್ಣಾಯ ತಂತ್ರಿ ನೇತೃತ್ವದಲ್ಲಿ ಜರುಗಿತು.10vpnidhikumbha

ಇದು ಜೀರ್ಣೋದ್ಧಾರದ ಮೊದಲ ಹಂತದ ಪೂಜಾ ಕಾರ್ಯಕ್ರಮವಾಗಿದ್ದು, ಹಲವಾರು ಭಕ್ತರು ನಿಧಿಕುಂಭಕ್ಕೆ ಚಿನ್ನ, ಬೆಳ್ಳಿ ಅರ್ಪಿಸಿ ಧನ್ಯರಾದರು.

ಪೂಜಾ ವಿಧಿ-ವಿಧಾನ ನಡೆದ ಸಂದರ್ಭದಲ್ಲಿ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ, ಕಾವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ ಭಟ್, ಮಹಮ್ಮಾಯಿ ದೇವಸ್ಥಾನದ ಶ್ರೀನಿವಾಸ ದಾಸಯ್ಯ, ಕಲ್ಲಿನ ಶಿಲ್ಪಿ ವಿಶ್ವನಾಥ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಮುಂಬೈ ಹೋಟೆಲ್ ಉದ್ಯಮಿ ಪದ್ಮನಾಭ ಪಯ್ಯಡೆ, ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿ ಬಾರಿ ಭಂಡಾರಿ, ರಘುರಾಮ ಭಟ್, ವೀಣಾ ಭಟ್, ಕಿಶೋರ್ ಭಂಡಾರಿ ಹಾಗೂ ದೇವಪ್ಪ ಪೂಜಾರಿ, ಉಮೇಶ ಶೆಟ್ಟಿ, ಪ್ರಕಾಶ ಶೆಟ್ಟಿ, ಬಾಲಕೃಷ್ಣ ಗುಂಡಾಲ, ಸಚ್ಚೀಂದ್ರನಾಥ ರೈ, ಲೋಕೇಶ ಪೂಜಾರಿ, ಜಯರಾಮ ಶೆಟ್ಟಿ, ರತ್ನಾಕರ, ಕೃಷ್ಣಪ್ರಸಾದ್‍ರೈ, ಮೋಹನ ಮೇಲಾಂಟ , ಉಮೇಶ್ , ಕಮಾಲಾಕ್ಷ ,ಪ್ರಕಾಶ, ದಿನೇಶ್ ,  ಪ್ರದೀಪ್,  ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *