ಸುದ್ದಿ9 ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ತಾಲೂಕು ವಗ್ಗ ವಲಯ ಉಳಿ ಕಾರ್ಯಕ್ಷೇತ್ರದ ಕಕ್ಯಪದವುನಲ್ಲಿ ಜರಗಿತು.
ತಾ.ಪಂ.ಸದಸ್ಯ ಸಂಪತ್ಕುಮಾರ್ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ಚೆನ್ನಪ್ಪ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಸಂಚಾರಿ ಆಸ್ಪತ್ರೆಯ ವೈದ್ಯಾಕಾರಿ ಡಾ|ನಾರಾಯಣ ಪ್ರಭು ಅವರು ಮಾತನಾಡಿ ವಾರಕ್ಕೆ 3 ದಿನದ ಹಾಗೆ 17 ಕ್ಯಾಂಪ್ ನಡೆಯಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು. ಪ್ರಮುಖರಾದ ಉಳಿ ದಾಮೋದರ ನಾಯಕ್, ಕೆ.ಮಾಯಿಲಪ್ಪ ಸಾಲಿಯಾನ್, ಚಿದಾನಂದ ರೈ , ಸಂಜೀವ ಗೌಡ, ಹರೀಶ್ ಕಕ್ಯ, ಇಂದಿರಾ, ಚೇತನ್ ಉದರ್ೊಟ್ಟು , ವಿಶ್ವನಾಥ ಬಿತ್ತ , ಸದಾನಂದ ಗೌಡ, ಒಕ್ಕೂಟ ಅಧ್ಯಕ್ಷ ಶೇಖರ್ ಕಂಚಲ್ಪಲ್ಕೆ, ಹರೀಶ್ ಮುರಿಯೋಡಿ ಉಪಸ್ಥಿತರಿದ್ದರು.
ಸೇವಾಪ್ರತಿನಿ ಶಿವಾನಂದ ಎ. ವಂದಿಸಿದರು. ವಗ್ಗ ವಲಯ ಮೇಲ್ವಿಚಾರಕ ವಸಂತ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

 

14-1

By suddi9

Leave a Reply

Your email address will not be published. Required fields are marked *