ಸುದ್ದಿ9 ಬಂಟ್ವಾಳ :ತಾಲೂಕು ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ 2013-14ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯು ಸೆ.16ರಂದು ಬ್ಯಾಂಕಿನ ವಠಾರದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಬಿ.ಯಶೋಧರ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸದಸ್ಯರಿಗೆ 2012-13ನೇ ಸಾಲಿಗೆ ಶೇ.7 ಡಿವಿಡೆಂಡ್ ಹಾಗೂ 2013-14ನೇ ಸಾಲಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಫೋಷಣೆ ಮಾಡಿದರು. ಹಾಗೂ ಕ್ಯಾಂಪ್ಕೋ ಸಹಯೋಗದಲ್ಲಿ ಅಡಿಕೆಯನ್ನು ಸಂಘದ ಮೂಲಕವೇ ಮಾರಾಟ ಮಾಡಿ ರೈತರು ಇದರ ಪ್ರಯೋಜನ ಪಡೆಯಬೇಕು. 2013-14ನೇ ಸಾಲಿನಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗಿದೆ ಎಂದು ಹೇಳಿದರು. ಬ್ಯಾಂಕ್ ಸುಮಾರು 1150.32 ಕೋಟಿ ರೂ. ವ್ಯವಹಾರ ನಡೆಸಿದ್ದು ಪಾಲು ಬಂಡವಾಳ 62.04 ಲ.ರೂ., ಠೇವಣಾತಿ 537.20 ಲ.ರೂ., ಕೇಂದ್ರ ಬ್ಯಾಂಕಿನ ಸಾಲಗಳು 383.75 ಲ.ರೂ., ಸಂಘದಲ್ಲಿ 130 ನವೋದಯ ಸ್ವಸಹಾಯ ಗುಂಪು ನೊಂದಾಯಿಸಿದೆ. ಅವುಗಳ ಉಳಿತಾಯ 28.09 ಲ.ರೂ., ಸ್ವಸಹಾಯ ಗುಂಪುಗಳಿಗೆ ಸಾಲ 32.19 ಲ.ರೂ. ವಿತರಿಸಲಾಗಿದೆ. ಸದಸ್ಯರ ಹೊರ ಬಾಕಿ ಸಾಲ 871.92 ಲ.ರೂ., ನಿವ್ವಳ ಲಾಭ 2013-14ನೇ ಸಾಲಿಗೆ 13,11,295 ಲ.ರೂ. ಲಾಭ ಗಳಿಸಿರುತ್ತದೆ. ಸಾಲ ವಸೂಲಾತಿ ಶೇ. 97.12 ರೂ., ಆಡಿಟ್ ಎ ವಗರ್ೀಕರಣ ಪಡೆದಿದೆ ಎಂದು ಅವರು ವಿವರ ನೀಡಿದರು.
ಈ ಸಂದರ್ಭದಲ್ಲಿ 2014-15ನೇ ಸಾಲಿಗೆ ದ.ಕ.ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಪಿಲಿಮೊಗರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಶಾರದಾದೇವಿ ಕೆ.ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ನಿದರ್ೇಶಕ ಪ್ರಭಾಕರ ಶೆಟ್ಟಿ , ಮಹಾಲಿಂಗ ಶರ್ಮ, ಹರೀಶ್ ಗಟ್ಟಿ , ಧರ್ಣಪ್ಪ ನಾಯ್ಕ , ಕೃಷ್ಣ ಶೆಟ್ಟಿ, ವಾರಿಜ, ವಲಯ ಮೇಲ್ವಿಚಾರಕ ಕೇಶವ ಕಿಣಿ ಎಚ್., ನವೀನ ಶೆಟ್ಟಿ , ಬ್ಯಾಂಕಿನ ಸಿಬಂದಿ ವರ್ಗ ಉಪಸ್ಥಿತರಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬಟರ್್ ಸಿ.ಡಿಸೋಜಾ ಅವರು ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಗಣನಾಥ ಶೆಟ್ಟಿ ವಂದಿಸಿದರು.
