ಮೂಡುಬಿದಿರೆ `:ಕಲ್ಲಮುಂಡ್ಕೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿ ಬಳಿಕ `ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಸ್ಮೇಹಿತರೊಬ್ಬರ ಮೊಬೈಲ್‍ಗೆ ಸಂದೇಶ ಕಳಿಸಿದ್ದ ಯುವ ಜೋಡಿಯ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಸ್ಥಳೀಯರ ನೆರವಿನಿಂದ ಗುರುವಾರ ಕಲ್ಲಮುಂಡ್ಕೂರಿನ ಪಿದುಮಲೆ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ.

ತೋಡಾರಿನ ಪದವೀಧರ ಯುವತಿ ಹಾಗೂ ಕಲ್ಲಮುಂಡ್ಕೂರಿನ ಬ್ಯಾಂಡ್ ಸೆಟ್ ಕಲಾವಿದ ಇತ್ತೀಚೆಗೆ ನಾಪತ್ತೆಯಾಗಿದ್ದರು. ಯುವಕನ ಸ್ಮೇಹಿತನ ಕಾರಿನಲ್ಲಿ ಕಾಪುಗೆ ಹೋಗಿದ್ದ ಈ ಜೋಡಿ ನಂತರ ಮುಲ್ಕಿಯಿಂದ ಬಾಡಿಗೆ ಕಾರಿನಲ್ಲಿ ಕಲ್ಲಮುಂಡ್ಕೂರು ಪಿದುಮಲೆ ಕಾಡು ಪ್ರದೇಶದಲ್ಲಿ ಬಂದಿಳಿದವರು ಮತ್ತೆ ನಾಪತ್ತೆಯಾಗಿದ್ದರು. ಕಾರಿನಲ್ಲಿ ಇವರ ಮೊಬೈಲ್ ಮತ್ತು ರೂ 10 ನೋಟು ಪತ್ತೆಯಾಗಿದ್ದು ನೋಟಿನಲ್ಲಿ `ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆಯಲಾಗಿತ್ತು. ಇವು ಪೊಲೀಸರ ವಶವಾಗಿದೆ. ಇನ್ನೊಂದೆಡೆ Áಜೋಸಡಿಯನ್ನು ತನ್ನ ಕಾರಿನಲ್ಲಿ ಕಾಪುಗೆ ಬಿಟ್ಟು ಬಂದಿದ್ದ ಸ್ನೇಹಿತರೊಬ್ಬರ ಮೊಬೈಲ್‍ಗು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂಬ ಸಂದೇಶ ರವಾನಿಸಲಾಗಿತ್ತು. ಈ ವಿಷಯ ತಿಳಿದು ಎರಡೂ ಮನೆಯವರು ಆತಂಕಕ್ಕೊಳಗಾಗಿದ್ದಾರೆ. ನಾಪತ್ತೆಯಾದ ಹುಡುಗ ಮತ್ತು ಹುಡುಗಿಯ ಮೊಬೈಲ್ ಸ್ವಿಚಡ್ ಆಫ್ ಆಗಿರುವುದರಿಂದ ಪತ್ತೆಗೆ ಪೊಲೀಸರಿಗೆ ತೊಡಕಾಗಿದೆ. ಏತನ್ಮಧ್ಯೆ ಜೋಡಿಯನ್ನು ತನ್ನ ಕಾರಿನಲ್ಲಿ ಕಾಪುಗೆ ಬಿಟ್ಟು ಬಂದ ಸ್ನೇಹಿತರಿಬ್ಬರನ್ನು ಪೊಲೀಸರು ಮತ್ತೆ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.