ಮೂಡುಬಿದಿರೆ: ಶಿರ್ತಾಡಿ ಭಾಗದ ಜನರು ಕಳೆದ ಹಲವು ವರ್ಷದಿಂದ ಸಬ್ಸ್ಟೇಶನ್ನ ಬೇಡಿಕೆ ಇಡುತ್ತಿದ್ದು, ಇದಕ್ಕೆ ಪೂರಕವಾಗಿ 33ಕೆವಿ ಸಾಮಥ್ರ್ಯದ ಸಬ್ಸ್ಟೇಶನ್ ಸ್ಥಾಪಿಸುವ ಬಗ್ಗೆ ಒಂದು ತಿಂಗಳ ಒಳಗಾಗಿ ಯೋಜನಾ ವರದಿಯನ್ನು ತಯಾರಿಸಲಾಗುವುದು. ಬಳಿಕ ಮೇಲಧಿಕಾರಿಗಳಿಗೆ ಕಳುಹಿಸಿಕೊಡುತ್ತೇವೆ ಎಂದು ಮೆಸ್ಕಾಂ ಮಂಗಳೂರು ವೃತ್ತ ಕಚೇರಿ ಇಂಜಿನಿಯರಿಂಗ್ ವಿಭಾಗದ ಅಧೀಕ್ಷಕ ಮಂಜಪ್ಪ ಗುರುವಾರ ಸಮಾಜಮಂದಿರದಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಭರವಸೆ ನೀಡಿದರು.

ಶಿರ್ತಾಡಿಗೆ 110 ಕೆವಿ ಸಾಮಥ್ರ್ಯದ ಸಬ್ಸ್ಟೇಶನ್ ಸ್ಥಾಪಿಸಲು ಒತ್ತಾಯ ಇರುವುದಾದರೂ ಅದಕ್ಕೆ ಬೇಕಾದ ಸುಮಾರು ಎರಡೂವರೆ ಎಕರೆ ಸರ್ಕಾರಿ ಜಮೀನನ್ನು ಮೆಸ್ಕಾಂ ಒದಗಿಸಿಕೊಡುವುದೂ ಸೇರಿದಂತೆ ಹಲವಾರು ಕಾರಣಗಳಿಂದ ವಿಳಂಬವಾಗುವ ಕಾರಣ ಸದ್ಯ 33 ಕೆವಿ. ಸಾಮರ್ಥ್ಯದ ಸಬ್ಸ್ಟೇಶನ್ ಸ್ಥಾಪನೆ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.
ಮೆಸ್ಕಾಂನವರ ತಾಂತ್ರಿಕ ತೊಂದರೆಗಳಿಂದ ರೈತರು ತೊಂದರೆಗೀಡಾಗುತ್ತಿದ್ದಾರೆ. ಪಂಪ್ಸೆಟ್ ಸಹಿತ ವಿದ್ಯುತ್ ಉಪಕರಣಗಳು ಕೆಟ್ಟುಹೋಗುತ್ತಿರುವುದರ ಬಗ್ಗೆ ರೈತ ಸಂಘ-ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್ ಪ್ರಸ್ತಾಪಿಸಿದರು. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆ ಶಾಲಾವರಣದಲ್ಲಿ ಹಳೆಯ ವಿದ್ಯುತ್ ತಂತಿ ಇರುವಲ್ಲಿ ಹೊಸದಾಗಿ ತಂತಿ ಎಳೆದು ಹೋಗಿದ್ದಾರೆ. ಆ ಪ್ರದೇಶ ವಿದ್ಯಾರ್ಥಿಗಳು ಆಟವಾಡುವ ಜಾಗವಾಗಿದ್ದು ಅಪಾಯಕಾರಿಯಾಗಿದೆ ಎಂದು ಶಾಲಾ ಮುಖ್ಯಶಿಕ್ಷಕಿ ಎಲ್ವಿರಾ ಪಿಂಟೋ ಅಧಿಕಾರಿಗಳ ಗಮನಕ್ಕೆ ತಂದರು.
ಮಾರೂರು ಉರ್ಪೆಲ್ಪಾದೆಯ ಅಂಗನವಾಡಿ ಬಳಿ ವಿದ್ಯುತ್ ತಂತಿ ಅಪಾಯಕಾರಿಯಾಗಿದೆ, ತಂತಿಯನ್ನು ಬೇರೆಡೆ ಹಾಯಿಸಿ ಎಂದು ಹತ್ತಿರದ ನಿವಾಸಿ ಎನ್.ಕೆ. ಸಾಲ್ಯಾನ್ ವಿನಂತಿಸಿದರು. ಮರದ ಗೆಲ್ಲುಗಳಿದ್ದರೆ ನಿವಾರಿಸಬಹುದು, ತಂತಿ ಬದಲಾಯಿಸುವ ವೆಚ್ಚವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ ಎಂದು ಅ„ಕಾರಿ ತಿಳಿಸಿದರು. ಈ ಪ್ರದೇಶದಲ್ಲಿ ದೈವಸ್ಥಾನ ನಿರ್ಮಾಣವಾಗಲಿರುವ ಕಾರಣ ಇಲಾಖೆಯವರೇ ತಂತಿಯನ್ನು ತುಸು ದೂರ ಹಾಕಿಕೊಟ್ಟರೆ ಒಳ್ಳೆಯದಿತ್ತು ಎಂದು ಸಾಲ್ಯಾನ್ ವಿನಂತಿಸಿದರು.
ಪಾಲಡ್ಕ ಗ್ರಾಮದ ಬೋವಾಡಿ ಬಳಿಯ ಟ್ರಾನ್ಸ್ಫಾರ್ಮರ್ನಿಂದ ಬೋವಾಡಿ, ಕೊಳಕೆಬÉೈಲು, ಹಿತ್ತಿಲು, ಮೂಡಾಯಿಬೆಟ್ಟು, ಅಂಗಡಿ ಬೆಟ್ಟು, ಹಕ್ಕೇರಿ ಮೊದಲಾದ ಕಡೆಗಳಲ್ಲಿರುವ ಮನೆಗಳು ಹಾಗೂ ಕೃಷಿಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದ್ದು ಈ ಭಾಗದ ತಂತಿಗಳು ಸುಮಾರು 40 ವರ್ಷಕ್ಕೂ ಹಳೆಯದಾಗಿವೆ, ಆಗಾಗ ತುಂಡಾಗಿ ಬೀಳುತ್ತಿವೆ. ಈ ಬಗ್ಗೆ ಕಳೆದ 4 ವರ್ಷಗಳಿಂದಲೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದ ರೈತರ ಸಹಿಗಳಿರುವ ಮನವಿಯನ್ನು ಗ್ರಾಮಾಂತರ ಪ್ರದೇಶದಲ್ಲಿರುವ ಶಿಥಿಲಗೊಂಡಿರುವ ಪರಿವರ್ತಕಗಳನ್ನು ಬದಲಾಯಿಸಲು ಏಕೆ ಎಸ್ಟಿಮೇಟ್ ಮಾಡಿಲ್ಲ ಎಂದು ಮಂಜಪ್ಪ ಅವರು ಕಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಳುವಾಯಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ವಿದ್ಯುತ್ಬಿಲ್ ಬರುತ್ತಿದೆ. ದೋಷವನ್ನು ಸರಿಪಡಿಸಿ ಎಂದು ಹಲವು ಬಾರಿ ಮೆಸ್ಕಾಂ ಕಚೇರಿಗೆ ತೆರಳಿದರು ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಪಂಚಾಯಿತಿ ಅಧ್ಯಕ್ಷ ಸೋಮನಾಥ ಕೋಟ್ಯಾನ್ ಹಾಗೂ ಪಿಡಿಒ ಭೀಮಾ ನಾಯ್ಕ್ ಸಭೆಯಲ್ಲಿ ಪ್ರಸ್ತಾಪಿಸಿದರು. ಸಮಸ್ಯೆಯನ್ನು ಪರಿಹರಿಸುವುದಾಗಿ ಮಂಜಪ್ಪ ಭರವಸೆ ನೀಡಿದರು.
ಮೆಸ್ಕಾಂ ಕಾವೂರು ಕಾರ್ಯನಿರ್ವಹಣ ಇಂಜಿನಿಯರ್ ಪ್ರೀತಿ, ಮೂಡುಬಿದಿರೆ ಮೆಸ್ಕಾಂ ಇಂಜಿನಿಯರ್ ಡಿ.ಆರ್.ಸತೀಶ್, ಸ. ಲೆಕ್ಕಾಧಿಕಾರಿ ಉಷಾಕಿರಣ್ ಕುಟಿನ್ಹ, ತಾಂತ್ರಿಕ ಇಂಜಿನಿಯರ್ ಕ್ಲೆಮಂಟ್ ಬೆಂಜಮಿನ್ ಬ್ರಾಗ್ಸ್, ಪ್ರಭಾರ ಶಾಖಾಧಿಕಾರಿ ಮಮತಾ, ಬೆಳುವಾಯಿ ಶಾಖಾಧಿಕಾರಿ ಅಮಿತ್ ಕುಮಾರ್, ಮೇಲ್ವಿಚಾರಕ ಬಾಲಕೃಷ್ಣ, ಕಲ್ಲಮುಂಡ್ಕೂರು ಶಾಖಾಧಿಕಾರಿ ಸುಭಾಸ್ ಆಚಾರ್ಯ ಉಪಸ್ಥಿತರಿದ್ದರು.