ಅಥಣಿ- ಸನ್ 2019-20 ನೇ ಸಾಲಿನ ಶೈಕ್ಷಣಿಕ ತರಗತಿಗಳು ಪ್ರಾರಂಭಗೊಂಡಿದ್ದು ಈಗಾಗಲೆ ವಸತಿ ನಿಲಯದಲ್ಲಿರುವ ವಿಧ್ಯಾರ್ಥಿನಿಯರು ವಸತಿನಿಲಯಕ್ಕೆ ಆಗಮಿಸಿದ್ದು ಅವರು ವಾಸಿಸುವ ಕೋಣೆಯ ಸ್ವಚ್ಚತೆ ಹಾಗೂ ಅಲ್ಲಿನ ಊಟದ ವ್ಯವಸ್ಥೆಯಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪರಿಶೀಲನೆಗೆಂದು ಗುರುವಾರ ಮಧ್ಯಾಹ್ನ ತಾಲೂಕಾ ಸಮಾಜಕಲ್ಯಾಣ ಅಧಿಕಾರಿ ಬಿ ಎಸ್ ಯಾದವಾಡ ಅವರು ಪಟ್ಟಣದ ತಾ.ಪಂ ಸಭಾಭವನದ ಹತ್ತಿರ ಇರುವಂತಹ ಮೆಟ್ರೀಕಪೂರ್ವ ಬಾಲಕೀಯರ ವಸತಿನಿಲಯವನ್ನು ಪರೀಶೀಲಿಸಿದರು.

13 athani-03

ಪರಿಶೀಲನೆ ನಡೆಸಿ ಮಾತನಾಡಿದ ಅವರು ಇತ್ತೀಚಿಗೆ ಮಳೆಗಾಲ ಪ್ರಾರಂಭವಾಗಿದ್ದು ಈಗಾಗಲೆ ತಾಲೂಕಿನಾದ್ಯಂತ ಡೆಂಗ್ಯೂ ಪ್ರಕರಣಗಳು ಉಂಟಾಗಿರುವುದರಿಂದ ನಮ್ಮ ವಸತಿನಿಲಯದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು ಅದಕ್ಕಾಗಿ ನಾನೆ ಖುದ್ದಾಗಿ ನಮ್ಮ ವ್ಯಾಪ್ತಿಗೆ ಬರುವಂತಹ ಎಲ್ಲಾ ವಸತಿನಿಲಯಗಳಿಗೆ ಭೇಟಿಕೊಟ್ಟು ಪ್ರತಿಯೊಬ್ಬ ನಿಲಯಪಾಲಕರಿಗೆ ಹಾಗೂ ಅಲ್ಲಿ ವಾಸಿಸುವಂತಹ ಮಕ್ಕಳಿಗೂ ಸ್ವಚ್ಚತೆಯ ಬಗೆಗೆ ಅರಿವು ಮೂಡಿಸಿ ಅವರನ್ನು ಉತ್ತಮವಾಗಿಟ್ಟುಕೊಳ್ಳಬೇಕಾಗಿದೆ ಎಂದರು.
ನಂತರ ಮಾತನಾಡಿದ ನಿಲಯಪಾಲಕಿ ಸುಜಾತಾ ದೊಡಮನಿ ಅವರು ನಮ್ಮ ವಸತಿನಿಲಯದಲ್ಲಿ ತುಂಬಾ ಸ್ವಚ್ಚತೆಯನ್ನು ಕಾಯ್ದುಕೊಂಡಿದ್ದು ಇಲ್ಲಿಯವರೆಗೆ ಯಾವ ತೊಂದರೆಯೂ ಸಂಭವಿಸಿಲ್ಲ ಹಾಗೂ ನಾವುಕೂಡ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದೆವೆ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಬಸವರಾಜ ಗುಮಟಿ, ಸುಬಾಸ ಮಾಳಿ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

ಪೊಟೊ ಶೀರ್ಷಿಕೆ- ಮೆಟ್ರೀಕಪೂರ್ವ ಬಾಲಕೀಯರ ವಸತಿ ನಿಲಯ ಪರಿಶೀಲಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಎಸ್ ಯಾದವಾಡ

By suddi9

Leave a Reply

Your email address will not be published. Required fields are marked *