ವಿಟ್ಲ :ಜೆಸಿಐ ಘಟಕ ವತಿಯಿಂದ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವನಮಹೋತ್ಸವ ಕಾರ್ಯಕ್ರಮವು ನಡೆಯಿತು. ಬಾಲವಿಕಾಸ ಕೇಂದ್ರದ ಅಧ್ಯಕ್ಷೆ ನಾಗವೇಣಿ, ಶಿಕ್ಷಕಿ ಸರಸ್ವತಿ ಯವರಿಗೆ, ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ ಹಣ್ಣಿನ ಗಿಡ ಮತ್ತು ಔಷಧಿಯ ಗಿಡಗಳನ್ನು ಹಸ್ತಾ0ತರಿಸಿ ವನಮಹೋತ್ಸವ ಆಚರಿಸಿದರು. ಜೆಸಿಐ ಅಧ್ಯಕ್ಷರಾದ ಬಾಲಕೃಷ್ಣ ವಿಟ್ಲ, ವನಮಹೋತ್ಸವದ ಬಗ್ಗೆ, ಪರಿಸರಜಾಗೃತಿಯ ಬಗ್ಗೆ ಅರಿವು ಮೂಡಿಸಿದರು.
ಶಿವಾನಿ .ಶೆಟ್ಟಿ, ಮಮತಾ ಸಂಜೀವ, ಶಾಂತಿ ಪಾಯಸ್, ಪೂರ್ವಾಧ್ಯಕ್ಷರಾದ ಭಾಸ್ಕರ್ ಶೆಟ್ಟಿ, ರಮೇಶ್ ಲೂಯಿಸ್ ಉಪಸ್ಥಿತರಿದ್ದರು.
