ಕೈಕಂಬ:ಲಯನ್ಸ್‍ಕ್ಲಬ್ ಗುರುಪುರ ಕೈಕಂಬದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕೈಕಂಬದ ಗ್ರಾಂಡ್ ಗ್ಯಾಲಕ್ಸಿ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಲಯನ್ಸ್ ರಾಯಭಾರಿ ಡಾ.ಮೆಲ್ವಿನ್ ಡಿ,ಸೋಜಾ ಪದಗ್ರಹಣ ಅಧಿಕಾರಿಯಾಗಿದ್ದರು. ನಿರ್ಗಮನ ಅಧ್ಯಕ್ಷ ಜೇಮ್ಸ್‍ಮೆಂಡ ಮತ್ತು ಕಾರ್ಯದರ್ಶಿ ಮೆಲ್ವಿನ್ ಡಿ.ಸೋಜಾ ನೂತನ ಅಧ್ಯಕ್ಷರಾದ ವಾಲ್ಟರ್ ಪೆರೀಸ್ ಮತ್ತು ಕಾರ್ಯದರ್ಶಿ ಮಹೇಶ್ ಶೆಟ್ಟಿ ಇವರಿಗೆ ಅಧಿಕಾರ ಹಸ್ತಾಂತರಿಸಿದರು.

2vp padagrahanaಕೋಶಾಧಿಕಾರಿಯಾಗಿ ಪ್ರದೀಪ್ ಸಲ್ಡಾನ ಅಧಿಕಾರ ಸ್ವೀಕರಿಸಿದರು. ಪ್ರಾಂತೀಯ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡಿಸ್, ವಲಯಾಧ್ಯಕ್ಷ ಜೆಫ್ರಿಯನ್ ತಾವ್ರೋ ವಿವಿಧ ಕ್ಲಬ್‍ಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯದಡಿಯಲ್ಲಿ ವರ್ನೆನ್ ಅವರ ಮನೆ ದುರಸ್ತಿಗೆ ಧನಸಹಾಯ ನೀಡಲಾಯಿತು.ಕೈಕಂಬ ಲಯನ್ಸ್ ಕ್ಲಬ್‍ನ ಓಸ್ವಾಲ್ಡ್ ಪೆರಿಸ್, ಅ್ಯರನ್,ಬಿ.ಎನ್ ಅಡ್ಯಂತಾಯ,ರಾಮಕೃಷ್ಣ ಶೆಟ್ಟಿ, ರಾಲ್ವಿನ್ ರೋಡ್ರಿಗಸ್, ಜೇಸನ್, ಜಯರಾಮ್ ಶೆಟ್ಟಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *