ಬಂಟ್ವಾಳ : ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಸಂಚಯಗಿರಿ 4 ನೇ ಮುಖ್ಯ ಕಾಂಕ್ರೀಟು ರಸ್ತೆ ಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಬಳಿಕ ಸಂಚಯಗಿರಿ ನಾಗರಿಕ ಕ್ರೀಯಾ ಸಮಿತಿ ವತಿಯಿಂದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಲ್ಲಿ ನಡೆದ ಸಭಾ ಕಾರ್ಯಕ್ರಮ ದಲ್ಲಿ    ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ  ಉದ್ದೇಶದಿಂದ ಈ ಭಾಗದ ನಿವಾಸಿಗಳಿಗೆ ಬಟ್ಟೆ ಕೈ ಚೀಲವನ್ನು ಬಿಡುಗಡೆಗೊಳಿಸಿ ವಿತರಿಸಲಾಯಿತು.FB_IMG_1564837477736

ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ,ಅದು ಪರಿಣಾಮಕಾರಿಯಾಗಿ ಕಾರ್ಯಗತಗೊಂಡಿಲ್ಲ,ಈ ನಿಟ್ಟಿನಲ್ಲಿ ಜನರ ಸಹಕಾರವು ಅಗತ್ಯವಿದೆ.  ಪ್ರತಿ ವಾರ್ಡ್ ನಲ್ಲೂ ಇಂತಹ ಕಾರ್ಯಕ್ರಮ ಗಳ ಮೂಲಕ ಜಾಗೃತಿ  ಮೂಡಿಸುವ ಕೆಲಸವಾಗ ಬೇಕಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.   FB_IMG_1564837658555

 ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್, ಜಯಂತಿ ವಸಂತ್,  ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ. ತುಕರಾಮ್ ಪೂಜಾರಿ,      ಎಸ್.ವಿ.ಎಸ್.ಕಾಲೇಜಿನ ಪ್ರಾಂಶುಪಾಲರಾದ  ಪಾಂಡುರಂಗ ನಾಯಕ್,  ನಿವೃತ್ತ ಉಪನ್ಯಾಸಕರಾದ ರಾಜಮಣಿ ರಾಮಕುಂಜ, ಸೀತಾರಾಮ ಮಯ್ಯ, ಸ್ಥಳೀಯರಾದ  ದಾಮೋದರ್ , ಕಿಶೋರ್ ಕೃಷ್ಣವಿಲಾಸ್, ರಮೇಶ್ ಸಾಲಿಯಾನ್ , ರಾಜಣ್ಣ, ಸುಧಾಕರ ಸಾಲಿಯಾನ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,  ಮಾಜಿ ಪುರಸಭಾ ಸದಸ್ಯರಾದ   ಭಾಸ್ಕರ ಟೈಲರ್, ಶ್ರೀನಿವಾಸ ಮಲ್ಲಿ, ಪ್ರದೀಪ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *