ಕೈಕಂಬ: ತುಳುನಾಡಲ್ಲಿ ಆಟಿ ಅಮಾವಾಸ್ಯೆ ಬಳಿಕ ನಾಗರ ಪಂಚಮಿ, ಅಷ್ಟಮಿ, ಚೌತಿ…ಹೀಗೆ ಒಂದರ ನಂತರ ಒಂದಂತೆ ವಾರ್ಷಿಕ ಹಬ್ಬಗಳು ಬರುತ್ತಿರುತ್ತವೆ. ಇಂದು ಜಿಲ್ಲೆಯ  ನಾನಾ  ಪ್ರದೇಶಗಳಲ್ಲಿ ಮತ್ತು ಹಳ್ಳಿಗಾಡುಗಳಲ್ಲಿ ಭಕ್ತರ ದಂಡು ಕಾಣಬಹುದಾಗಿದೆ.  ಹಿಂದುಗಳ   ಕೌಟುಂಬಿಕ ಹಿನ್ನೆಲೆಯಲ್ಲಿ  ಆಯಾಯ  ಮೂಲಸ್ಥಾನದ  ನಾಗದೇವರಿಗೆ ವಿಶೇಷವಾಗಿ  ನಾಗ ಬನಗಳಿಗೆ    ತೆರಳುವ ತುಳುವರು ಭಕ್ತಿ-ಭಾವಗಳಿಂದ ಪೂಜೆ ನಡೆಸುತ್ತಿರುವುದು ಕಂಡು ಬರುತ್ತದೆ.IMG20190805120511

ಮಂಗಳೂರು ತಾಲೂಕಿನ ಮರವೂರು ಪೇಜವರದ ಮಾಗಣೆಯ ಗಾಂದೊಟ್ಟು ದಿ.ಪರಮೇಶ್ವರ ಪೂಜಾರಿಯವರ ನಾಗಬನದಲ್ಲಿ ಕುಕ್ಯಾನ್ ಕುಟುಂಬಿಕರು ಆರಧಿಸಿಕೊಂಡು ಬಂದಿರುವ ಬನದಲ್ಲಿನಾಗದೇವರಿಗೆ ನಾಗತಂಬಿಲವು ಸಿದ್ದಕಟ್ಟೆ ಸೀತಾರಾಮ ಪುರೋಹಿತರ ನೇತೃತ್ವದಲ್ಲಿ ಸೋಮವಾರ ನಡೆಯಿತು.IMG20190805120517

ಎಡೆಬಿಡದೆ ಬರುತ್ತಿರುವ ಮಳೆಯ ನಡುವೆಯು ಬೆಳಗ್ಗೆಯಿಂದಲೆ ನಾಗಬನಕ್ಕೆ ಆಗಮಿಸಿದ ಕುಟುಂಬಿಕರು ಹಾಲು, ಸೀಯಾಳ, ಹಿಂಗಾರ, ಸಂಪಿಗೆ,ಹೂಗಳನ್ನು ತಂದು ಪುರೋಹಿತರಲ್ಲಿ ನೀಡಿ ಹರಕೆಯ ರೂಪದಲ್ಲಿ ಭಕ್ತಾಧಿಗಳು ತಂಬಿಲ ಮುಂತಾದ ಸೇವೆಯನ್ನು ನಾಗದೇವರಿಗೆ ಸಮರ್ಪಿಸಿದರು. ನಾಗನಿಗೆ ಹಾಲು,ಹರಸಿನ,ಕಲ್ಲುಸಕ್ಕರೆ ಕ್ಷೀರಾಭಿಷೇಕ , ಸೀಯಾಳಾಭಿಷೇಕ ನೆರವೇರಿಸಿದ ಬಳಿಕ ಮಧ್ಯಾಹ್ನ 12ಗಂಟೆಗೆ ಮಹಾಪೂಜೆ ನೆರವೇರಿತು.ಸುಮಾರು 750 ತಂಬಿಲ ಕುಕ್ಯಾನ್ ಕುಟುಂಬಿಕರ ಪರವಾಗಿ ನಡೆಯಿತು. ನಾಗದೇವರಿಗೆ ಬ್ರಹ್ಮರ್ಪಣೆಯ ಬಳಿಕ ಅನ್ನದಾನ ನಡೆಯಿತು.

By suddi9

Leave a Reply

Your email address will not be published. Required fields are marked *