ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಮಹೋತ್ಸವ ಜರಗಲಿದೆ.
ಸೆ.24ರಂದು ಬುಧವಾರದಿಂದ ಆರಂಭಗೊಂಡು ಅ.2ರಂದು ಗುರುವಾರದ ವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಲಿದೆ.
ಸೆ.24ರಿಂದ ಪ್ರತಿದಿನ ದೇವಿ ಸನ್ನಿಧಿಯಲ್ಲಿ ಚಂಡಿಕಾಹೋಮವು ನಡೆಯುತ್ತಿದ್ದು ಅ.2ರಂದು ಗುರುವಾರ ಮಹಾನವಮಿ ಪ್ರಯುಕ್ತ ದೇವಳದ ವತಿಯಿಂದ “ಚಂಡಿಕಾಹೋಮ” ವು ಜರಗಲಿದೆ.
24ರಂದು ಸಂಜೆ 6 ಗಂಟೆಯಿಂದ : “ನ್ರತ್ಯ ರತ್ನ ಪ್ರಶಸ್ತಿ ಪುರಸ್ಕೃತೆ ” ರಶ್ಮಿ ಚಿದಾನಂದ, ನ್ರತ್ಯ ಭಾರತಿ ತಂಡ ಮಂಗಳೂರು ಇವರಿಂದ “ನವದುರ್ಗಾ ” ನ್ರತ್ಯ ರೂಪಕ ಹಾಗೂ “ನಾಟ್ಯವರ್ಷಿಣಿ” ನೃತ್ಯ ವೈವಿದ್ಯ ನಡೆಸಿಕೊಡಲಿದ್ದಾರೆ.
ಸೆ.25 ಗುರುವಾರ 6ಗಂಟೆಯಿಂದ : ಭಕ್ತ ಭೀಷ್ಮ ಹರಿಕಥೆ, ಕಥೆ ಕೀರ್ತನ ಕೋವಿದ ಈಶ್ವರದಾಸ್ ಕೊಪ್ಪೆಸರ (ಭದ್ರಗಿರಿ ಅಚ್ಚುತದಾಸ್ ಶಿಷ್ಯ ಇವರಿಂದ.
ಸೆ. 26ರಂದು ಶುಕ್ರವಾರ 6ಗಂಟೆಯಿಂದ : ನರ್ತನ ಕಲಾವಿದರು, ಉರ್ವ ಮಂಗಳೂರು ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಹಾಗೂ ಫಿಟ್ ನೆಸ್ ,ಗ್ರೂಫ್ ಕೈಕಂಬ ಇವರಿಂದ ನೃತ್ಯ .
ಸೆ.27ರಂದು ಸಂಜೆ 6ಗಂಟೆಯಿಂದ : “ಪೊಳಲಿ ಯಕ್ಷೊತ್ಷವ” ಯಕ್ಷ ಕಲಾ ಪೊಳಲಿ ಇವರ 19ನೇ ವಾರ್ಷಿ ಕೋತ್ಸವದ ಸಲುವಾಗಿ ಯಕ್ಷ- ಗಾನ -ವೈಭವ, ಸನ್ಮಾನ, ಪ್ರತಿಭಾ ಪುರಸ್ಕಾರ, ರಾತ್ರಿ 9.30ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ವಿದ್ಯುನ್ಮತಿ ಕಲ್ಯಾಣ -ಮಹಾಕಲಿ ಮಗದೇಂದ್ರ,
ಸೆ.28ರಂದು ಭಾನುವಾರ ಸಂಜೆ ಗಂಟೆ 6 ಗಂಟೆಯಿಂದ: ರೂಪಕಲಾ (ಕುಳ್ಳಪ್ಪು) ಕುಂದಾಪುರ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರಿಂದ ಹಾಸ್ಯಮಯ ಕನ್ನಡ ನಾಟಕ “ಮೂರು ಮುತ್ತು”. ಪ್ರಸ್ತುತಪಡಿಸಲಿದ್ದಾರೆ.
ಸೆ.29ರಂದು ಸೋಮವಾರ ಸಂಜೆ6ಗಂಟೆಯಿಂದ: ಕು.ಮಯೂರಿ ಇವರಿಂದ(ವಿದೂಷಿ ಶ್ರೀಮತಿ ಸುಚಿತ್ರ ಹೊಳ್ಳ ಪುತ್ತೂರು ಇವರ ಶಿಷ್ಯೆ } ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಮಧೂಸೂಧನ ಭಟ್ ಗುರುಪುರ ಇವರಿಂದ ಹಿಂದೂಸ್ಥಾನಿ ಸಂಗೀತ.
ಸೆ.30ರಂದು ಮಂಗಳವಾರಸಂಜೆ ಗಂಟೆ 6 ಗಂಟೆಯಿಂದ : ಯಕ್ಷಗಾನ ತಾಳಮದ್ದಳೆ “‘ದಕ್ಷಾದ್ವರ” ಹಿಮ್ಮೇಳದಲ್ಲಿ ಅಮ್ಮಣ್ಣಾಯ, ಅಡೂರು,ಶೆಟ್ಟಿಗಾರ್,ದೇವಾನಂದ, ಯುವರಾಜ, ವಾದಿರಾಯ ಕಲ್ಲೂರಾಯ, ಸುಣ್ಣಂಬಳ, ಸಿದ್ದಕಟ್ಟೆ ವಿ.ಶೆಟ್ಟಿ, ವಾಸುದೇವ ರಂಗಭಟ್, ಉಜಿರೆ, ರಾಮಜೋಯಿಸ.ಅವರು ಭಾಗವಹಿಸಲಿದ್ದಾರೆ.
ಅ. 1 ರಂದು ಬುಧವಾರ ಸಂಜೆ 6 ಗಂಟೆಯಿಂದ : ಶಿವರಂಜಿನಿ ಮ್ಯೂಸಿಕಲ್ಸ್ ಪೊಳಲಿ ಇವರಿಂದ ಗಾನ -ನ್ರತ್ಯ -ಸಂಭ್ರಮ.
ಅ.2ರಂದು ಗುರುವಾರ ಸಂಜೆ 6 ಗಂಟೆಯಿಂದ : ನವರಾತ್ರಿ ವೇಷಗಳ ಸಂಭ್ರಮ. ಜರಗಲಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಸುದ್ದಿ9ಗೆ ತಿಳಿಸಿದ್ದಾರೆ.
