ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಸಮಿತಿ  ಮಂಗಳವಾರ ಪಾಂಗಲ್ಪಾಡಿಯ  ಸತ್ಯನಾರಾಯಣ ಸಭಾ ಭವನದಲ್ಲಿ ಇರ್ವತ್ತೂರು ಪಂಚಾಯತ್ ವಲಯದ “ಪಂಚಾಯತ್ ಮಿಲನ 2019” ಕಾರ್ಯಕ್ರಮ ಮಾಜಿ ಸಚಿವ  ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಶಿಸ್ತಿನ ಸಿಪಾಯಿಯಂತೆ ಕಾರ್ಯಪ್ರವರ್ತರಾಗಲು ಕರೆ ನೀಡಿದರು.

ಆರು  ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರನ್ನಾಗಿ ಮಾಡಿದ ಋಣ ನನ್ನ ಮೇಲಿದೆ ಆ ಋಣವನ್ನು ಜನ್ಮ ಜನ್ಮಾಂತರ ಮರೆಯಲು ಅಸಾಧ್ಯ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅದ್ಯಕ್ಷತೆ ವಹಿಸಿ ಕಾರ್ಯಕರ್ತರು ಸಂಘಟಣಾತ್ಮಕವಾಗಿ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾಕ್ಕೆ ತರಲು ಹೆಚ್ಚು ಶ್ರಮವಹಿಸುವಂತೆ ಕರೆ ನೀಡಿದರು.

tf

ಕಾರ್ಯಕರ್ತರು ತ್ಯಾಗ ಮನೋಭಾವದಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಪಕ್ಷದ ಬಲವರ್ಧನೆಗೆ ಒತ್ತು ಕೊಡುವಂತೆ ಆಗ್ರಹಿಸಿದರು ಮುಂದಿನ ಅವಧಿಗೆ ವಲಯ ಹಾಗೂ ಬೂತ್ ಸಮಿತಿಯನ್ನು ಪುನರ್ ರಚಿಸಿ ನೂತನ ವಲಯ ಅಧ್ಯಕ್ಷರನ್ನಾಗಿ ಪ್ರಶಾಂತ್ ಜೈನ್ ಸೇವಾ ಹಾಗೂ ಬೂತ್ ಸಮಿತಿ ಅದ್ಯಕ್ಷರಾಗಿ ಮುನ್ಸೂರು ಇಲಾಹಿ ಪಂಜೋಡಿ, ಪದ್ಮನಾಭ ಶೆಟ್ಟಿ  ಮಠ, ಪ್ರಶಾಂತ್ ಕೋಟ್ಯಾನ್ ಮೇಗಿನ ಮನೆ, ಅಲ್ತಾಫ್ ಬಾಂಬಿಲ ಇವರನ್ನು ಆಯ್ಕೆಮಾಡಲಾಯಿತು.

ಯುವ ಕಾಂಗ್ರೆಸ್ ಅದ್ಯಕ್ಷರನ್ನಾಗಿ ಹೈದರ್ ಪಂಜೋಡಿ ಹಾಗೂ ಮಹಿಳಾ ಅಧ್ಯಕ್ಷರಾಗಿ  ಜಯಶ್ರಿ ಇವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ವೀಕ್ಷಕರಾದ ಬಿ.ಆರ್ ಅಂಚನ್, ಪಂಚಾಯತ್ ಸದಸ್ಯರಾದ ಸುದೀಂದ್ರ ಶೆಟ್ಟಿ, ಮುಖಂಡರಾದ ಶೇಖ್ ರಹಮತುಲ್ಲ,ಹಮೀದ್ ಪಂಜೋಡಿ, ಗುರುಪ್ರಸಾದ್ ಶೆಟ್ಟಿ, ಜಹೀರ್ ಸಾಹೇಬ್, ಎಂ. ಜಯರಾಮ್ ಶೆಟ್ಟಿ, ಡಿ.ಎನ್ ಸಂಜೀವ, ನಜೀರ್ ಸಾಹೇಬ್, ಕೃಷ್ಣ ಮೂಲ್ಯ, ಗೋಪಾಲ ಪೂಜಾರಿ ನೇರಳಕಟ್ಟೆ, ಪೂವಪ್ಪ ಬೆಳ್ಚಡ ಉಪಸ್ಥಿತರಿದ್ದರು. ಪಂ.ಸದಸ್ಯರಾದ ಪ್ರಶಾಂತ್ ಕೋಟ್ಯಾನ್ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *