ಬಂಟ್ವಾಳ:  ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್ ಪಾಣೆಮಂಗಳೂರು ವಲಯ ಸಮಿತಿ ಇದರ ಮಹಾಸಭೆ ಮತ್ತು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮವು  ಪಾಣೆಮಂಗಳೂರಿನ  ರಾಂದೇವ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
        Karnataka State Tailores Asscoiation
ಕಾರ್ಯ ಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಏ.ಎಸ್. ಆನಂದ್, ರಾಜ್ಯದ ಪ್ರಧಾನ ಕಾರ್ಯದರ್ಶಿ ವಸಂತ, ಜಿಲ್ಲಾ ಅಧ್ಯಕ್ಷ ಪ್ರಜ್ವಲ್ ಕುಮಾರ್, ರಾಜ್ಯ ಸಮಿತಿಯ ಸ್ಥಾಪಕ ಸದಸ್ಯರಾದ ನಾರಾಯಣ, ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ಈಶ್ವರ ಕುಲಾಲ್, ಕಾರ್ಯದರ್ಶಿಯಾದ ನಾಗೇಶ್ ಎಂ, ಕೋಶಾಧಿಕಾರಿ ಯಾದೇಶ್ ತುಂಬೆ, ಭಾಗವಹಿಸಿದ್ದರು. ಇದೇ ವೇಳೆ ಹಿರಿಯ ಟೈಲರ್‌ಗಳಾದ  ಕಟ್ಟೆಮಾರ್ ಹಾಗೂ ಹೂವಯ್ಯ ಕುಲಾಲ್‌ರನ್ನು ಸನ್ಮಾನಿಸಲಾಯಿತು. ಬಳಿಕ ಪಾಣೆಮಂಗಳೂರು ವಲಯ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಅಶೋಕ ಕುಮಾರ್   (  ಅಧ್ಯಕ್ಷ) ,ಲೋಕೇಶ್ ಕುಲಾಲ್ ( ಕಾರ್ಯದರ್ಶಿ), ದಿನೇಶ್ ಮೆಲ್ಕಾರ್ ( ಕೋಶಾಧಿಕಾರಿ),   ರಾಜೀವಿ ಮತ್ತು ಮಮತ(ಜತೆ ಕಾರ್ಯದರ್ಶಿ) ಯಾಗಿ ಆಯ್ಕೆಗೊಂಡರು. ರಾಜೀವಿ ವಂದಿಸಿದರು. ನಾಗೇಶ ಎಂ. ನಿರೂಪಿಸಿದರು.

By suddi9

Leave a Reply

Your email address will not be published. Required fields are marked *