ಬಂಟ್ವಾಳ: ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿಯಲ್ಲಿ ವಾಸ್ತವ್ಯವಿರುವ ಗೋವಿಂದ ಮೂಲ್ಯ ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕಾಗಿ ಬಂಟ್ವಾಳ ಕುಲಾಲ ವೇದಿಕೆ ನೀಡಿದ ಭರವಸೆಯಂತೆ ಸಿಮೆಂಟ್ ನ ಇದುವರೆಗೆ ಖರ್ಚಾದ 98 ಚೀಲ ಸಿಮೆಂಟ್ ನ ಪೈಕಿ ಎರಡನೇ ಕಂತಿನ ಧನಸಹಾಯದ ಚೆಕ್ ನ್ನು ಹಸ್ತಾಂತರಿಸಿದರು.
ಬಂಟ್ವಾಳ ಕುಲಾಲ ವೇದಿಕೆ ನಿರ್ಧರಿಸಿದಂತೆಗೋವಿಂದ ಮೂಲ್ಯ ರ ಮನೆಯ ಸ್ಲಾಬ್ ಕೆಲಸದವರೆಗೆ ಕಾಮಗಾರಿ ಪೂರ್ಣವಾಗಿದ್ದು, ವೇದಿಕೆ ಸದಸ್ಯರು ಸ್ಥಳಕ್ಕೆ ತೆರಳಿ ಮನೆಯ ಕಾಮಗಾರಿ ಪರಿಶೀಲಿಸಿ ಬಳಿಕ ಗೋವಿಂದ ಮೂಲ್ಯರಿಗೆ ಚೆಕ್ ಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅವರ ಪತ್ನಿ ಮೀನಾಕ್ಷಿ ಬಂಟ್ವಾಳ ಕುಲಾಲ ವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಗೌರವಾಧ್ಯಕ್ಷರಾದ ನಾರಾಯಣ ಸಿ ಪೆರ್ನೆ, ಗೌರವ ಸಲಹೆಗಾರರಾದ ಶೇಷಪ್ಪ ಮಾಸ್ಟರ್ , ಜೊತೆ ಕಾರ್ಯದರ್ಶಿ ಜಯರಾಜ್ ಬಂಗೇರ ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲ್ ಉಪಸ್ಥಿತರಿದ್ದರು.