ಕೈಕಂಬ:ಅಡ್ಡೂರು 33ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭ ಉತ್ತರ ವಿಧಾನಸಭಾ ಶಾಸಕ ವೈ ಭರತ್ ಶೆಟ್ಟಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಅವರನ್ನು ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಶಾಸಕರೊಂದಿಗೆ ಗುರುಪುರ ಗ್ರಾ.ಪಂ ಸದಸ್ಯ ರಾಜೇಶ್ಪೂಜಾರಿ,ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಹರೀಶ್ ಬಳ್ಳಿ ಹಾಗೂ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಪದಾಧಿಕಾರಿಗಳಾದ ಚಿದಾನಂದ ಗುರಿಕಾರ, ಕಿರಣ್ ಶೆಟ್ಟಿ , ಶೇಖರ ಕೋಡಿಬೆಟ್ಟು, ಪ್ರೇಮ್ ನಂದ್ಯ, ಗೋಪಾಲ ಆಚಾರ್ಯ, ಅಶೋಕ್ ನಂದ್ಯ, ಸುಭಾಷ್ ಮತ್ತಿತರರು ಉಪಸ್ಥಿತರಿದ್ದರು.