ಕುಪ್ಪೆಪದವು:ಮಂಗಳೂರು ತಾಲೂಕಿನ ಮುತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಅನುಷ್ಟಾನಗೊಂಡಿರುವ ವಿವಿಧ ಕಾಮಗಾರಿಗಳನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಬುಧವಾರ ಉದ್ಘಾಟಿಸಿದರು.

ಸುಮಾರು 25ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡ ಮುತ್ತೂರು ತೂಗುಸೇತುವೆ ರಸ್ತೆ, 4ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟೀಕೃತಗೊಂಡ ಮುತ್ತೂರು ಮಟ್ಟುರಸ್ತೆ, ಹತ್ತು ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕೃತ ಮುತ್ತೂರು ಬಾಳಿಕೆ ರಸ್ತೆ, ಇಪ್ಪತ್ತು ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡ ಕುಳವೂರಿನ ನಡುಗುಂಡ್ಯ ರಸ್ತೆ, 1.60 ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕೃತ ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಸ್ತೆ, ಮೂರು ಲಕ್ಷ ವೆಚ್ಚದ ಕುಳವೂರು ಬಳ್ಳಾಜೆ ಕಡವು ರಸ್ತೆಗಳನ್ನು ಉದ್ಘಾಟಿಸಲಾಯ್ತು. ಅಲ್ಲದೆ ಕುಳವೂರು ಗ್ರಾಮದ ಅಟ್ಡೆಪದವು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದೇ ವೇಳೆ ಶಂಕುಸ್ಥಾಪನೆಯನ್ನು ಶಾಸಕರು ನೆರವೇರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ತಾ.ಪಂ.ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಸದಸ್ಯರುಗಳಾದ ಪ್ರವೀಣ್ ಆಳ್ವ, ಸತೀಶ್ ಬಳ್ಳಾಜೆ, ಜಗದೀಶ್ ದುರ್ಗಾಕೋಡಿ, ಪುಷ್ಪಾನಾಯ್ಕ್, ವಸಂತಿ, ಮಮತಾ,ತಾರಾನಾಥ್ ಕುಳಾಲ್, ಜೆರಾಲ್ಡ್ ಪಿಂಟೋ, ಪ್ರಭಾವತಿ, ಸರಸ್ವತಿ ಹಾಗೂ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಜಯ್ ಅಮೀನ್ ನಾಗಂದಡಿ, ಬ್ಲಾಕ್ ಕಾರ್ಯದರ್ಶಿ ಸಂತೋಷ್ ಆಳ್ವ, ಕುಪ್ಪೆಪದವು ಸ್ಥಾನೀಯ ಸಮಿತಿ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಮುಖಂಡರಾದ ಸದಾನಂದ ಶೆಟ್ಟಿ ಕುಳವೂರುಗುತ್ತು, ಹೊನ್ನಯ್ಯ ಅಟ್ಟೆಪದವು, ಹರ್ಷಿತ್ ಮುಂತಾದವರು ಉಪಸ್ಥಿತರಿದ್ದರು.