ಬಂಟ್ವಾಳ, : ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ಸಜೀಪ ಮಿತ್ತಮಜಲು ಸಮೀಪದಲ್ಲಿ ಸರಕಾರಿ ಗೌರವಗಳೊಂದಿಗೆ ಜೋಗಿ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.

IMG-20191014-WA0037
ಪುತ್ತೂರು ಡಿವೈಎಸ್‌ಪಿ ದಿನಕರ ಶೆಟ್ಟಿ ಅವರ ನಿರ್ದೇಶನದಂತೆ ಸಶಸ್ತ್ರ ಮೀಸಲು ಪಡೆಯ ಇನ್ಸ್ಪೆಕ್ಟರ್ ನಾರಾಯಣ ಪೂಜಾರಿ ಅವರ ನೇತೃತ್ವದಲ್ಲಿ ಪೋಲೀಸ್ ವಂದನೆಯೊಂದಿಗೆ ಮೂರು ಬಾರಿ ಕುಶಾಲು ತೋಪು ಹಾರಿಸಿ ಸರಕಾರಿ ಗೌರವ ಸಲ್ಲಿಸಲಾಯಿತು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಪಿಎಸ್‌ಐಗಳಾದ ಚಂದ್ರಶೇಖರ್, ಡಾ| ಸುಧಾಕರ್ ತೋನ್ಸೆ, ರಾಮ ನಾಯ್ಕ್ ಅವರು ಗೌರವ ಸಲ್ಲಿಸಿದರು.

IMG-20191014-WA0027
ಕುಟುಂಬದವರ ಪರವಾಗಿ ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ, ಪುತ್ರರಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಗುರುಪ್ರಸಾದ್ ಕದ್ರಿ, ಪುತ್ರಿ ಅಂಬಿಕಾ, ಸಹೋದರರಾದ ಚಂದ್ರನಾಥ್, ರಮೇಶ್‌ನಾಥ್, ಗಣೇಶ್‌ನಾಥ್ ಮುಂತಾದವರು ಗೌರವ ಸಲ್ಲಿಸಿದರು.

IMG-20191014-WA0029
ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ನಂದಾವರ ಕ್ಷೇತ್ರದ  ವ್ಯವಸ್ಥಾಪನ ಅಧ್ಯಕ್ಷ ಎ.ಸಿ.ಭಂಡಾರಿ, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಡಿ.ಎಸ್.ಮಮತಾ ಗಟ್ಟಿ, ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಡ, ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸದಸ್ಯ ಕೆ.ಸಂಜೀವ ಪೂಜಾರಿ, ಪ್ರಮುಖರಾದ ಕೆ.ಪಿ.ಜಗದೀಶ್ ಅಧಿಕಾರಿ, ಹರಿಕೃಷ್ಣ ಬಂಟ್ವಾಳ್, ಸುದರ್ಶನ ಜೈನ್, ಯತೀಶ್ ಬೈಕಂಪಾಡಿ, ಬಿ.ದೇವದಾಸ ಶೆಟ್ಟಿ, ಕಿಶೋರ್ ರೈ, ಶ್ರೀಕಾಂತ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಸುದೀಪ್‌ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ಸೀತಾರಾಮ ಶೆಟ್ಟಿ, ಜಯಶಂಕರ ಬಾಸ್ರಿತ್ತಾಯ, ಗಂಗಾಧರ ಭಟ್ ಕೊಳಕೆ, ಯಶವಂತ ದೇರಾಜೆ, ಪಿ.ಕೆ.ಗಣೇಶ್, ಕಂದಾಯ ಇಲಾಖೆಯ ರಾಮ ಕಾಟಿಪಳ್ಳ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ನಮನ ಸಲ್ಲಿಸಿದರು.

IMG-20191014-WA0031 IMG-20191014-WA0032 IMG-20191014-WA0038 IMG-20191014-WA0039

 

By suddi9

Leave a Reply

Your email address will not be published. Required fields are marked *