ಬಂಟ್ವಾಳ: ಭ್ರಾಮರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸೆ, ಬೆಂಗಳೂರು ಇದರ ವತಿಯಿಂದ ವಾಮದಪದವು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಸುಮಾರು ೨೦೦೦೦ ಸಾ.ರೂ. ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
book photoಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿ.ಎ. ಕೋರ್ಸಿನ ಬಗ್ಗೆ ಪೂರ್ವ ತಯಾರಿ ವಿಷಯ ಸೂಚಿ, ಅಧ್ಯಯನ ವಿಧಾನ ಇವುಗಳ ಬಗ್ಗೆ ಮಾಹಿತಿ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಭ್ರಾಮರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸೆಯ ಸುನೀಲ್ ಭಂಡಾರಿ, ಸಿ.ಎ., . ರವಿರಾಜ್ ಶೆಟ್ಟಿ, ಸಿ.ಎ., ಕಾರ್ತಿಕ್ ರೈ, ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ಸಂಯೋಜಕರಾದ ಪ್ರೊ. ಚಂದ್ರಕಾಂತ ಶೆಣೈ ಮತ್ತು ಪ್ರೊ. ಅಶೋಕ ಕುಮಾರ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು, ಕು. ಭವ್ಯ ಪ್ರಾರ್ಥಿಸಿದರು, ನಿತೀನ್ ವಿ.ಶೆಟ್ಟಿ ವಂದಿಸಿದರು.

 

By suddi9

Leave a Reply

Your email address will not be published. Required fields are marked *