ದೇಶದಲ್ಲಿ  ಪ್ರತೀ 2 ಸೆಕೆಂಡ್ ಗೆ 1 ಯುನಿಟ್ ರಕ್ತದ ಅವಶ್ಯಕತೆ ಇರುತ್ತದೆ . ರಕ್ತದ ಕೊರತೆಯನ್ನು ಮನಗಂಡು ಶಿಬಿರಗಳ ಮೂಲಕ  ರಕ್ತದಾನದ ಜಾಗ್ರತಿಯನ್ನು ಮೂಡಿಸುವ ಕಾರ್ಯ ಮಾಡುತ್ತಿರುವ ಸೇವಾಂಜಲಿ  ಉತ್ತಮ ಕೆಲಸ ಮಾಡುತ್ತಿದೆ . ಅಂಮ್ತಾಡಿ ಗ್ರಾಮದ ಕುಮಾರಿ ನಕ್ಷಿತಾ ರವರ  ಶಸ್ತ್ರಚಿಕಿಸ್ಥೆಗೆ ಅವಶ್ಯ ವಿರುವ ಸುಮಾರು 15 ಯುನಿಟ್ ಬಹಳ ವಿರಳ ವಿರುವ  ಎ ನೆಗೆಟಿವ್ ರಕ್ತ ದ ಅವಶ್ಯಕತೆಗಾಗಿ ಈ ರಕ್ತದಾನ ವನ್ನು ಆಯೋಜಿಸಲಾಗಿದೆ ಎಂಬುದು ರಕ್ತದಾನ ದ  ಬಗ್ಗೆ ಸಂಸ್ಥೆಗೆ ಇರುವ ಕಾಳಜಿ ಬಗ್ಗೆ ಅರಿವಾಗುತ್ತದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ ರಾದ ಶ್ರೀಮತಿ ರಶ್ಮಿ ಎಸ್ ಆರ್ ರವರು ಸೇವಾಂಜಲಿ  ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಹಾಗು ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ ಆಯೋಜಿಸಲಾದ ವಿಶೇಷ ವಾಗಿ  ಎ ನೆಗೆಟಿವ್ ಗುಂಪಿನ  ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.

IMG_0145_resize

 ಈ ಸಂದರ್ಭದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆ ಯ ವೈದ್ಯಕೀಯ ಅಧೀಕ್ಷಕರಾದ ಮೇಜರ್ ಡಾ ಶಿವಕುಮಾರ್ ಹಿರೇಮಠ , ಕೆ ಎಸ್ ಹೆಗ್ಡೆ ಆಸ್ಪತ್ರೆ ಯ  ಪೇಶಂಟ್ ಕೇರ್ ಆಫೀಸರ್  ಶ್ರೀರಾಮ್ ,ಸೇವಾಂಜಲಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ  ಕಳ್ಳಿಗೆ  ಪಂಚಾಯತ್ ಉಪಾಧ್ಯಕ್ಷರಾದ  ಪುರುಷ ಎನ್ ಸಾಲ್ಯಾನ್ , ಭಾಸ್ಕರ್ ಚೌಟ ಕುಂಭ್ಡೇಲು , ದಿನೇಶ್ ಎನ್ ತುಂಬೆ , ಪ್ರಶಾಂತ್ ಕುಮಾರ್ ತುಂಬೆ , ಎ ಮ್  ಕೆ  ಖಾದರ್ ಮಾರಿಪಳ್ಳ , ಕರುಣ್ ಶೆಟ್ಟಿ ಕೊಟ್ಟಿಂಜ ,ಬಿ ನಾರಾಯಣ ಮೇರಮಜಲು , ಜನಾರ್ಧನ ಪೂಜಾರಿ  ಮತ್ತಿತರರು ಉಪಸ್ಥಿತರಿದ್ದರು
  ಶಿಬಿರದಲ್ಲಿ  ಎ ನೆಗೆಟಿವ್ ಗುಂಪಿನ 20 ಯೂನಿಟ್ ಇತರ ಒಟ್ಟು 78ಯೂನಿಟ್ ರಕ್ತ ಸಂಗ್ರಹಿಸಲಾಯಿತು   ತಾರಾನಾಥ್ ಕೊಟ್ಟಾರಿ  ತೇವು ಸ್ವಾಗತಿಸಿದರು , ಕೃಷ್ಣ ಕುಮಾರ್ ಪೂಂಜಾರವರು ಪ್ರಸ್ತಾಪಿಸಿದರು , ಅರ್ಜುನ್ ಪೂಂಜಾ ವಂದಿಸಿದರು

By suddi9

Leave a Reply

Your email address will not be published. Required fields are marked *