ಬಂಟ್ವಾಳ: ಬಿಲ್ಲವ ಕಣ್ಮನಿಗಳ ಅಭಿನಂದನಾ ಸಮಿತಿ, ಬಂಟ್ವಾಳ ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ ತಾಲೂಕು ಮತ್ತು ಮಾಣಿ ಘಟಕದ ಆಶ್ರಯದಲ್ಲಿ ಡಿಸೆಂಬರ್ 8ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ ” ನಮ ಬಿರುವೆರ್ ಐಕ್ಯತಾ ಸಮಾವೇಷ” ದ ವಾಹನ ಪ್ರಚಾರದ ಸ್ಟಿಕ್ಕರನ್ನು ಅನಂತಾಡಿಯ ಪಡಿಪ್ಪಿರೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಯುವವಾಹಿನಿ ಮಾಣಿ ಘಟಕದ ಆಶ್ರಯದಲ್ಲಿ ಪಡಿಪ್ಪಿರೆ ಗದ್ದೆಯಲ್ಲಿ ನಡೆದ ಕೆಸರ್ ಡೊಂಜಿ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾವೇಷದ ಸಲಹೆಗಾರ ಈಶ್ವರ ಪೂಜಾರಿ ಕಡೇಶಿವಾಲಯ ಸ್ಟಿಕ್ಕರ್ ಬಿಡುಗಡೆಗೊಳಿಸಿದರು.
IMG-20191118-WA0065
ಸಮಾವೇಷ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು ಮತ್ತು ಪ್ರಧಾನ ಕಾರ್ಯದರ್ಶಿ ಜಗದೀಶ ಕೊಯಿಲ ಸಮಾವೇಷದ ಬಗ್ಗೆ ಮಾಹಿತಿ ನೀಡಿದರು.
ಸಮಿತಿಯ ಗೌರವಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಪ್ರೇಮನಾಥ್ ಕೆ., ಸಮಾವೇಷ ಸಮಿತಿಯ ಪ್ರಮುಖರಾದ ಲೋಕೇಶ್ ಸುವರ್ಣ ಅಲೆತ್ತೂರು, ಶ್ರೀಧರ ಅಮೀನ್, ಸುಂದರ ಪೂಜಾರಿ ಮೆಲ್ಕಾರ್, ಗೋಪಾಲ ಅಂಚನ್, ಗೋಪಾಲ ಪೂಜಾರಿ ನೆಟ್ಲಮೂಡ್ನೂರು, ರಮೇಶ ಪೂಜಾರಿ ಮುಜಲ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *