ಬಂಟ್ವಾಳ: ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಾಕೃತಿಕ ವಿಕೋಪದಡಿ ಮಂಜೂರಾದ 6.47 ಲಕ್ಷ ರೂ. ಮೌಲ್ಯದ ಚೆಕ್ ನ್ನು ಬಿ.ಸಿ. ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ವಿತರಿಸಲಾಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಿದರು.

ಇತ್ತೀಚೆಗೆ ನಾವೂರ ಗ್ರಾಮದ ಬಡಗುಂಡಿ ನಿವಾಸಿ ಪೂವಪ್ಪ ಸಪಲ್ಯ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಪಾಕೃತಿಕ ವಿಕೋಪದಡಿ 5 ಲಕ್ಷ ರೂ.ನ ಚೆಕ್ ಅವರ ಪತ್ನಿ ಗೋಪಿ ಅವರಿಗೆ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕಾವಳಪಡೂರು ಗ್ರಾಮದ ಪ್ರಕಾಶ್ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ75 ಸಾವಿರ ರೂ.ವಿನ ಚೆಕ್ ಹಾಗೂ ಪಾಕೃತಿಕ ವಿಕೋಪದಡಿ ತಲಾ 5,200 ರೂ.ನಂತೆ 16 ಮಂದಿಗೆ 83,200 ರೂ . ಚೆಕ್ ವಿತರಿಸಲಾಯಿತುು.
ಈ ಸಂದರ್ಭದಲ್ಲಿ ಸದಾನಂದ ನಾವೂರ, ದೇವದಾಸ್ ಶೆಟ್ಟಿ, ಉದಯಕುಮಾರ್ ರಾವ್, ಚೆನ್ನಪ್ಪ ಆರ್.ಕೋಟ್ಯಾನ್, ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮಕರಣೀಕರಾದ ರಾಜು ಲಂಬಾಣಿ, ಕುಮಾರ್, ಪ್ರವೀಣ್, ಸದಾನಂದ ನಾವೂರು, ಜನಾರ್ಧನ ಕೊಂಬೆಟ್ಟು, ಪ್ರವೀಣ್ ಗಟ್ಟಿ, ನವೀನ್ ಅಂಚನ್, ಸುಮತಿ ಎಸ್, ದಯಾನಂದ ಸಜಿಪಮುನ್ನೂರು ಉಪಸ್ಥಿತರಿದ್ದರು.