ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಿವಿದೆಡೆಯ ರಸ್ತೆಯ ಮರುಡಾಮಾರೀಕರಣ ಮತ್ತು ಅಭಿವೃದ್ದಿಗೆ   9.94  ಕೋ.ರೂ  ಅನುದಾನ ಮಂಜೂರುಗೊಂಡಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

IMG_20190626_174058
ಬಡಗಕಜೆಕಾರು ಗ್ರಾಮದ ನರ್ಸಿಕುಮೇರು-ಪಾಂಡವರಕಲ್ಲು ರಸ್ತೆ 1.35 ಕೋಟಿ,ಮಣಿನಾಲ್ಕೂರು ಗ್ರಾಮದ ಬಜ-ಅಜಿಲಮೊಗರು ರಸ್ತೆ 1.70 ಕೋಟಿ,
ಕರೋಪಾಡಿ ಗ್ರಾಮದ ಅರಸೊಳಿಕೆ ರಸ್ತೆ 60 ಲಕ್ಷ, ಅನಂತಾಡಿ ಗ್ರಾಮದ ಕೊಂಬಿಲ-ಅನಂತಾಡಿ ರಸ್ತೆ 1.50 ಕೋಟಿ, ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ 86 ಲಕ್ಷ,ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ದಾಸಕೋಡಿ ರಸ್ತೆ 1.50 ಕೋಟಿ,ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು-ಕಳ್ಳಿಗೆ ರಸ್ತೆ 80 ಲಕ್ಷ, ದೇವಸ್ಯಪಡೂರು ಗ್ರಾಮದ ಕುಂಟಾಲಪಲ್ಕೆ-ಅಲ್ಲಿಪಾದೆ ರಸ್ತೆ 98 ಲಕ್ಷ,ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಗಂಡಿ-ಕೊಟ್ಟುಂಜ ರಸ್ತೆ 65 ಲಕ್ಷ ರೂ.ನಂತೆ ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *