ಮೂಡುಬಿದಿರೆ:ಪುತ್ತಿಗೆ ಗ್ರಾಮದ ಅಬ್ಬಣ್ಣಗುತ್ತು-ಗೊಲ್ಲರಬೆಟ್ಟು ರಸ್ತೆಗೆ 2018-19ನೇ ಸಾಲಿನ ಲೋಕೋಪಯೋಗಿ 25 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಡಾಮರು ಅಳವಡಿಕೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮೂಲ್ಕಿ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಿಂದ ಅಬ್ಬಣಗುತ್ತು ಹೋಗುವ ಪ್ರವೇಶ ರಸ್ತೆ ನಾದುರಸ್ತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಂಕ್ರೀಟು ರಸ್ತೆಯಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದರು.

mbd_jan17_1
ಪುತ್ತಿಗೆ ಗ್ರಾಪಂ ಅಧ್ಯಕ್ಷ ಮೋಹಿನಿ ಶೆಟ್ಟಿ, ಸದಸ್ಯರಾದ ಗಿರೀಶ್ ಕುಮಾರ್ ಹಂಡೇಲು, ನಾಗರಾಜ ಕರ್ಕೇರಾ, ದಿನೇಶ್ ಗೌಡ, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜಯ್ ರೈ, ಬಿಜೆಪಿ ಮೂಡುಬಿದಿರೆ ಮಂಡಲ ಎಸ್‍ಟಿ ಮೋರ್ಚಾದ ಅಧ್ಯಕ್ಷ ಕಿಶೋರ್, ಹಿರಿಯ ಕಾರ್ಯಕರ್ತ ಸದಾನಂದ ಗುರುಸ್ವಾಮಿ ಕಾಪಿಕಾಡು, ಗ್ರಾಮಸ್ಥರಾದ ಆನಂದ ಮೂಲ್ಯ, ಆನಂದ ಪೂಜಾರಿ, ಜಯಂತ್ ಕುಲಾಲ್, ಪಿಡಬ್ಲ್ಯುಡಿ ಇಂಜಿನಿಯರ್ ರಾಘವೇಂದ್ರ, ಗುತ್ತಿಗೆದಾರ ನಟರಾಜ್ ಜೈನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *