ಮೂಡುಬಿದಿರೆ : ಜೇಸಿಐ ಮೂಡುಬಿದಿರೆ ತ್ರಿಭುವನ್ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಸಮಾಜ ಮಂದಿರದಲ್ಲಿ ನಡೆಯಿತು. ನಿರ್ಗಮನ ಅಧ್ಯಕ್ಷ ಸುದೀಪ್ ಬುನ್ನನ್ ಅವರು ನೂತನ ಅಧ್ಯಕ್ಷ ಜೇಸಿ ಸಂತೋಷ್ ಕುಮಾರ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಸಂದೀಪ್ ಕುಮಾರ್ ಅತಿಥಿಯಾಗಿ ಭಾಗವಹಿಸಿ 4 ಜನ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

14 mood jci

ಜೇಸಿಐ ವಲಯ 15ರ ಜೇಸಿ ಉಪಾಧ್ಯಕ್ಷ ಮೇಧಾವಿ ಎಂ ಅವರು ಪದಪ್ರಧಾನವನ್ನು ನೆರವೇರಿಸಿದರು.
ಮೂಡುಬಿದಿರೆ ಕೋ-ಅಪರೇಟಿವ್ ಸರ್ವೀಸ್ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪದಾಧಿಕಾರಿಗಳು ನಾವೆಲ್ಲರು ಒಂದೇ ಎಂಬ ಭಾವನೆಯಿಂದ ಸ್ವಯಂ ಸೇವಕರಂತೆ ದುಡಿಯುವ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಆತ್ಮತೃಪ್ತಿಯೊಂದಿಗೆ ಸಮಾಜಸೇವೆಯನ್ನು ಮಾಡುವ ಮೂಲಕ ಗುರುತಿಸಿಕೊಳ್ಳಬೇಕೆಂದರು.
2019ರ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಿಕಟಪೂರ್ವ ಅಧ್ಯಕ್ಷೆ ಸಂಗೀತಾ ಎಂ.ಪ್ರಭು ಅವರನ್ನು ಗೌರವಿಸಲಾಯಿತು. ಜೇಸಿರೇಟ್ ಅಧ್ಯಕ್ಷೆ ವೀಣಾ ಸಂತೋಷ್, ಜೆಜೆಸಿ ಅಧ್ಯಕ್ಷ ಜಯಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಸುದೀಪ್ ಬುನ್ನನ್ ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಂಡಿಸಿದರು. ನೂತನ ಕಾರ್ಯದರ್ಶಿ ದಯಾನಂದ ಹೆಗ್ಡೆ ವಂದಿಸಿದರು. ಜೇಸಿ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *