ಬಂಟ್ವಾಳ: ಶ್ರದ್ಧಾ ಕೇಂದ್ರಗಳು ಉತ್ತಮವಾಗಿದ್ದರೆ ಭಕ್ತಿ, ಶ್ರದ್ಧೆ ಉತ್ತಮವಾಗಿರುತ್ತದೆ. ಕಕ್ಯಪದವಿನ ಗ್ರಾಮೀಣ ಪ್ರದೇಶದ ಜನರ ದಾನ, ಧರ್ಮದ ಗುಣದ ಹೃದಯ ವೈಶಾಲ್ಯತೆ,ಶ್ರದ್ಧೆ,ಅಚಲ ವಿಶ್ವಾಸ ಅನನ್ಯವಾದುದು. ಆದ್ದರಿಂದ ದೇವಸ್ಥಾನ ಅಭಿವೃದ್ಧಿಯಾಗಿದೆ ಎಂದು ಸುಬ್ರಹ್ಮಣ್ಯ ಶ್ರೀ ನರಸಿಂಹ ಮಠ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹೇಳಿದರು.  ನವೀಕರಣಗೊಂಡ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವರ್ಷಾವ„ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ದೇವರಲ್ಲಿ ನಂಬಿಕೆಯಿರಿಸಿ ಶ್ರದ್ಧೆ,ಭಕ್ತಿಯಿಂದ ಸತ್ಯ-ಧರ್ಮದ ಮಾರ್ಗದಲ್ಲಿ ನಡೆದಾಗ ಉತ್ತಮ ಬದುಕು ಸಾಧ್ಯವಾಗುತ್ತದೆ ಎಂದರು.  ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಈ ಹಿಂದೆ ಕೇವಲ ಆರ್ಥಿಕ ಸ್ಥಿತಿವಂತರು ಮತ್ತು ಬಲಾಢ್ಯರಿಗೆ ಸೀಮಿತವಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇದೀಗ ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರೂ ಆರ್ಥಿಕವಾಗಿ ಸ್ಥಿತಿವಂತರಾಗಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದೆ. ತುಳುನಾಡಿನಲ್ಲಿ ಜನರಿಗೆ ಅತಿ ಹೆಚ್ಚು ಭೂಮಿ ಹಂಚಿಕೆಯಾಗಿರುವ ಪ್ರದೇಶವಾಗಿದೆ.ಇದರಿಂದಾಗಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳ ಪುನುರುತ್ಥಾನ ಸಾಧ್ಯವಾಗಿದೆ ಎಂದರು.

1701pktG1
ಅಮೆರಿಕಾ ನ್ಯೂಜೆರ್ಸಿ ಶ್ರೀ ಕೃಷ್ಣ ಬೃಂದಾವನದ ಪ್ರ.ಅರ್ಚಕ ಯೋಗೇಂದ್ರ ಭಟ್ ಉಳಿ ಅವರು ಧಾರ್ಮಿಕ ಉಪನ್ಯಾಸ ನೀಡಿ, ವಿದೇಶಿಯರೂ ಆಕರ್ಷಿತರಾಗಿ ಧ್ಯಾನ,ಯೋಗ ,ಸಾತ್ವಿಕ ಆಹಾರಪದ್ಧತಿಗಳನ್ನು ಆಚರಿಸುವಂತಹ ಉತ್ತಮ ಸಂಸ್ಕøತಿ ಭಾರತೀಯರದು . ಶ್ರದ್ಧಾ ಭಕ್ತಿಯಿಂದ ದೇವಾಲಯದಲ್ಲಿ ಪ್ರಾರ್ಥಿಸಿದಾಗ ಭಗವಂತನ ಶಕ್ತಿ ಸಂಚಯಿತವಾಗಿ ಇಷ್ಟಾರ್ಥ ಸಿದ್ಧಿಯಾಗುವುದು ಎಂದರು.  ದೇವಸ್ಥಾನದ ಸ್ಥಾಪಕಾಧ್ಯಕ್ಷ ಜಾರಪ್ಪ ಶೆಟ್ಟಿ ಖಂಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಬಾರ್ದಡ್ಡು ಗುತ್ತು ಮನೆತನದ ಮೊಕ್ತೇಸರ ರಾಜವೀರ ಜೈನ್, ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ದ.ಕ.ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಸುಬ್ರಹ್ಮಣ್ಯ ಉದ್ಯಮಿ ರವಿ ಕಕ್ಯಪದವು, ಮುಂಬಯಿ  ಉದ್ಯಮಿ ನಾರಾಯಣ ಶೆಟ್ಟಿ ಕಕ್ಯ, ನಿರಂಜನ್ ಉಪ್ಪಿನಂಗಡಿ, ಸಮಿತಿ ಕಾರ್ಯದರ್ಶಿ ನಾರಾಯಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿ ಪದಾ„ಕಾರಿಗಳಾದ ಪಿ.ರಾಮಯ್ಯ ಭಂಡಾರಿ, ಸಂಜೀವ ಗೌಡ ಅಗ್ಪಲ, ವಿಶ್ವನಾಥ ಸಾಲ್ಯಾನ್ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್, ವಿವಿಧ ಸಮಿತಿ ಸಂಚಾಲಕರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ದಾಮೋದರ ನಾಯಕ್ ಅವರು ಸ್ವಾಗತಿಸಿದರು.ಕಾವ್ಯಶ್ರೀ ನಾಯಕ್ ಆಜೇರು ಪ್ರಾರ್ಥಿಸಿದರು.ಪುರಂದರ ಕುಕ್ಕಾಜೆ ವಂದಿಸಿದರು. ಗುರುಪ್ರಕಾಶ್ ಕೊರಡಿಂಗೇರಿ ಸಹಕರಿಸಿದರು. ಶಿಕ್ಷಕ ಮುರಳೀಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *