ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಎದುರು ಗುರುವಾರ ನಡೆದ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ
ಗಣಪತಿ-ಶಾರದೆ ಆರಾದನೆಯಿಂದ ವಿದ್ಯೆ: ಕರಿಂಜೆ ಶ್ರೀ
ಕೇವಲ ಶೃದ್ಧೆ ಮತ್ತು ಭಕ್ತಿಯೊಂದಿಗೆ ಯಾವುದೇ ಆಡಂಬರವಿಲ್ಲದೆ ವಿಘ್ನವಿನಾಯಕ ಗಣಪತಿ ಮತ್ತು ಶಾರದೆ ಮಾತೆಯನ್ನು ಆರಾದಿಸಿದಾಗ ವಿದ್ಯೆ ಬುದ್ಧಿ ಜೊತೆಗೆ ಶಿಕ್ಷಣದ ಸಿದ್ಧಿಯೂ ಲಭಿಸುತ್ತದೆ ಎಂದು ಕರಿಂಜೆ ಮುಕ್ತಾನಮದ ಸ್ವಾಮೀಜಿ ಹೇಳಿದ್ದಾರೆ.
ತಾಲ್ಲೂಕಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಎದುರು ರಾಯಿ-ಕೊಯಿಲ-ಅರಳ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಗುರುವಾರ ನಡೆದ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಹಿರಿಯ ವಕೀಲ ಕಜೆ ರಾಮಚಂದ್ರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಸ್ಪರ ಸೌಹಾರ್ದತೆ ಮತ್ತು ಧಾಮರ್ಿಕ ನಂಬಿಕೆ ದೇಶೀಯ ಸಂಸ್ಕೃತಿ ಜೀವನ ಪದ್ಧತಿಯಾಗಬೇಕು ಎಂದರು. ಅರಳ ಶ್ರೀ ಗರುಡ ಮಹಾಕಾಳಿ ದೇವಳ ಪ್ರಧಾನ ಅರ್ಚಕ ಎ.ರಾಜ ಭಟ್, ಬಂಟ್ವಾಳ ಪುರಸಭಾ ಸದಸ್ಯ ಪ್ರವೀಣ ಜಕ್ರಿಬೆಟ್ಟು, ಪ್ರಗತಿಪರ ಕೃಷಿಕ ಸನತ್ ಕುಮಾರ್ ಜೈನ್ ಹಿಣರ್ಿ, ಶಿಕ್ಷಕ ಮಹೇಶ್ ಕಕರ್ೆರಾ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರನ್ನು ಸನ್ಮಾನಿಸಲಾಯಿತು. ಕರಿಂಜೆ ಮುಕ್ತಾನಂದ ಸ್ವಾಮೀಜಿ, ಸಮಿತಿ ಅಧ್ಯಕ್ಷೆ ಜೆ.ಕೆ.ಪಾವನಾದೇವಿ, ಎಂ.ಪದ್ಮರಾಜ ಬಲ್ಲಾಳ್ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷೆ ಜೆ.ಕೆ.ಪಾವನಾದೇವಿ, ಗೌರವಾಧ್ಯಕ್ಷ ಎ.ರಾಮಣ್ಣ ರೈ ಮಾವಂತೂರು, ಗೌರವ ಸಲಹೆಗಾರ ಎಂ.ಪದ್ಮರಾಜ್ ಬಲ್ಲಾಳ್ ಮಾವಂತೂರು, ಡಾ. ಕೃಷ್ಣಮೂತರ್ಿ ಭಟ್ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರನ್ನು ಸಮ್ಮಾನಿಸಲಾಯಿತು. ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಸನ್ಮಾನಿತರನ್ನು ಪರಿಚಯಿಸಿದರು.
ಸಮಿತಿ ಕೋಶಾಧಿಕಾರಿ ರಾಘವೇಂದ್ರ ಭಟ್ ಮಾವಂತೂರು ಸ್ವಾಗತಿಸಿ, ಸಮಿತಿ ಗೌರವಾಧ್ಯಕ್ಷ ಜಯರಾಮ ರೈ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದಶರ್ಿ ರಾಮಚಂದ್ರ ಶೆಟ್ಟಿಗಾರ್ ಹಾಂತ್ಲಾಜೆ ವಂದಿಸಿದರು. ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.