ಬಂಟ್ವಾಳ : ತಾಲೂಕಿನ ಸಜಿಪಮೂಡ ಗ್ರಾಮದ ಕಂಚಿಲ ಸಮೀಪದ ಕೋಮಾಲಿ ಎಂಬಲ್ಲಿನ ಅಂಗನವಾಡಿ ಕೇಂದ್ರದ ಸುತ್ತ ಪೊದೆ-ಗಿಡಗಳು ಆಳೆತ್ತರಕ್ಕೆ ಬೆಳೆದಿದ್ದು, ಪುಟಾಣಿಗಳು ಅಂಗನವಾಡಿ ಪ್ರವೇಶಕ್ಕೆ ಹೆದರಿಕೊಳ್ಳುವ ಪರಿಸ್ಥಿತಿ ನಿಮರ್ಾಣಗೊಂಡಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಗಾಂಧಿ ಜಯಂತಿ ದಿನದಂದು ಅಧಿಕಾರಿಗಳು, ಕಛೇರಿ ಸಿಬ್ಬಂದಿಗಳು ನಾಡಿನ ಪ್ರಮುಖ ಪಟ್ಟಣಗಳಲ್ಲಿ ಹೋಗಿ ಸ್ವಚ್ಛತಾ ಆಂದೋಲನದ ಮೂಲಕ ಪರಿಸರ ಸ್ವಚ್ಛಗೊಳಿಸಿ ಮಾಧ್ಯಮಗಳಿಗೆ ಫೋಟೋ ಫೋಸ್ ನೀಡಿ ಸಾರ್ಥಕತೆ ಪಡೆದುಕೊಂಡಿದ್ದಾರೆ. ಇಂತಹ ಮಾಧ್ಯಮ ಪ್ರಚಾರದ ಕಾರ್ಯಕ್ಕೆ ಇಳಿಯುವ ಬದಲು ತಮ್ಮ ತಮ್ಮ ಕಛೇರಿ ಆವರಣದ ಸುತ್ತ ಸ್ವಚ್ಛಗೊಳಿಸಿದ್ದರೆ ಅದರಿಂದೇನಾದರೂ ಪ್ರಯೋಜನವಾಗುತ್ತಿತ್ತು ಎಂಬ ಅಭಿಪ್ರಾಯ ಇಲ್ಲಿನ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಅದೂ ಅಲ್ಲದೆ ಕಳೆದ ಐದಾರು ದಿನ ಸರಣಿ ಸರಕಾರಿ ರಜೆ ಇದ್ದಾಗಲೂ ಯಾವುದಾದರೂ ಒಂದು ದಿನ ಮೀಸಲಾಗಿಸಿ ಅಂಗನವಾಡಿ ಕೇಂದ್ರದ ಸುತ್ತ ಸ್ವರ್ಚಗೊಳಿಸಲು ಕ್ರಮ ಕೈಗೊಂಡಿದ್ದರೆ ಗ್ರಾಮಸ್ಥರು ಕೂಡಾ ಅಧಿಕಾರಿಗಳ ಕೇಂದ್ರದ ಸಿಬ್ಬಂದಿಗಳ ಜೊತೆ ಈ ಒಂದು ಉತ್ತಮ ಕಾರ್ಯಕ್ಕೆ ಕೈಜೋಡುಸುತ್ತಿದ್ದರು ಎಂದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಕೆ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಕೇಂದ್ರದ ಸಿಬ್ಬಂದಿಗಳು ಎಚ್ಚೆತ್ತು ಇಲ್ಲಿನ ಅಂಗನವಾಡಿ ಕೇಂದ್ರದ ಸುತ್ತ ಬೆಳೆದಿರುವ ಕಳೆ-ಗಿಡಗಳು ಹಾಗೂ ಪೊದೆಗಳನ್ನು ಸ್ವಚ್ಚಗೊಳಿಸಿ ಅಂಗನವಾಡಿಗೆ ಬರುವ ಮಕ್ಕಳ ಹಿತವನ್ನು ಕಾಪಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.