ಕೈಕಂಬ:ಬಜ್ಪೆ, ಮಳವೂರು, ಜೋಕಟ್ಟೆ ಮತ್ತು ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ಎಂಟು ಮಂದಿ ಸಂತ್ರಸ್ತರಿಗೆ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಒಟ್ಟು 3,65,200 ರೂ ಪರಿಹಾರ ಧನ ವಿತರಿಸಿದರು.
ಈ ವೇಳೆ ಜಿಪಂ ಸದಸ್ಯರು, ತಾಪಂ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
