ಬಂಟ್ವಾಳ:  ಸೋಮವಾರ ಬೆಂಗಳೂರಿನ ಕಿಯೋನಿಕ್ಸ್ ಕಚೇರಿಯಲ್ಲಿ  ಅಧಿಕಾರ ಸ್ವೀಕರಿಸಿರುವ ಹರಿಕೃಷ್ಣ ಬಂಟ್ವಾಳ ಅವರು  ಜೂ.17ರಂದು ಬುಧವಾರ ಹುಟ್ಟೂರಿಗೆ ಆಗಮಿಸಲಿದ್ದಾರೆ.‌
ಮೊದಲಿಗೆ ಅವರು ಬಂಟ್ವಾಳ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.IMG_20200616_172027
ಬಳಿಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು  ಹಾಗೂ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪಕ್ಷ ಪ್ರಮುಖರು , ಕಾರ್ಯಕರ್ತರನ್ನು ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಭೇಟಿಯಾಗಲಿದ್ದಾರೆ. ನಂತರ ಮಂಗಳೂರಿನ ಕಂಕನಾಡಿ ಗರಡಿ ಕ್ಷೇತ್ರ, ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡುವರು. ಬಳಿಕ  ಜಿಲ್ಲಾ ಬಿಜೆಪಿ ಕಚೇರಿ , ಸಂಘನಿಕೇತನಕ್ಕೂ ಭೇಟಿ ನೀಡಲಿರುವರು ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *