ಬಂಟ್ವಾಳ:  ಬಂಟ್ವಾಳ ತಾಲೂಕಿನಲ್ಲಿ ಗುರುವಾರ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಬ್ಬರು ಸಾವನ್ನಪ್ಪಿರುವ ಕುರಿತು ದ.ಕ.ಜಿಲ್ಲಾಧಿಕಾರಿ ಹೊರಡಿಸಿದ ಮಾಹಿತಿಯಲ್ಲಿ ಹೇಳಲಾಗಿದೆ. ತಾಲೂಕಿನ ಕಲ್ಲಡ್ಕ ನಿವಾಸಿ 52 ವರ್ಷದ ಪುರುಷ ಕೋವಿಡ್ ಸೋಂಕಿನಿಂದ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಜುಲೈ 21ರಂದು ದಾಖಲಾಗಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಜುಲೈ 22ರಂದು ಅವರು ನಿಧನ ಹೊಂದಿದ್ದು,ಗುರುವಾರ  ಅಂತ್ಯಕ್ರಿಯೆ ಕಲ್ಲಡ್ಕದಲ್ಲಿ ನಡೆಯಿತು.

ಬಂಟ್ವಾಳ ತಾಲೂಕಿನಲ್ಲಿ ಬಿ.ಸಿ.ರೋಡು ಜೋಡುಮಾರ್ಗದ ೫೯ ವರ್ಷದ ಪುರುಷ, ಮಾರಿಪಳ್ಳದ ೪೭ ವರ್ಷದ ಪುರುಷ, ವಿಟ್ಲ ಕಸಬಾದ ೬೫ ವರ್ಷದ ಪುರುಷ, ಬಂಟ್ವಾಳ ಬಿ.ಮೂಡಾದ ೫೭ ವರ್ಷದ ಪುರುಷ, ಬಿ.ಸಿ.ರೋಡಿನ ೨೭ ವರ್ಷದ ಮಹಿಳೆ, ಬೆಂಜನಪದವಿನ ೨೭ ವರ್ಷದ ಮಹಿಳೆ, ಸಜೀಪಮುನ್ನೂರಿನ ೨೧ ವರ್ಷದ ಮಹಿಳೆ, ಬಂಟ್ವಾಳ ಕಸ್ಬಾದ ೬೨ ವರ್ಷದ ಮಹಿಳೆ, ಕಡೇಶ್ವಾಲ್ಯದ ೨೫, ೫೨ ವರ್ಷದ ಮಹಿಳೆ, ಬಂಟ್ವಾಳದ ೪೫ ವರ್ಷದ ಪುರುಷ, ಕಾಂಪ್ರಬಲಿನ ೪೬ ವರ್ಷದ ಮಹಿಳೆ, ಕೈಕಂಬದ ೫೫ ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

 ಎಸ್ .ಬಿ .ಐಯಲ್ಲಿ ಸ್ಯಾನಿಟೈಸ್: 

ಸ್ಠೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿ.ಸಿ.ರೋಡ್ ಶಾಖೆಯ  ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಗುರುವಾರ ಬ್ಯಾಂಕ್ ನ ಒಳಭಾಗ,ಸುತ್ತಮತ್ತ ಪುರಸಭೆಯ ವತಿಯಿಂದ ರಾಸಾಯನಿಕ ದ್ರಾವಣ ಸಿಂಪಡಿಸಲಾಯಿತಲ್ಲದೆ ಒಂದು ದಿನದ ಮಟ್ಟಿಗೆ ಬ್ಯಾಂಕಿನಲ್ಲಿ ವ್ಯವಹಾರವು ಸ್ಥಗಿತಗೊಂಡಿತ್ತು.

By suddi9

Leave a Reply

Your email address will not be published. Required fields are marked *